ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಸಿಕರ ಮನದ ಮುಗಿಲಲ್ಲಿ ಗಾಳಿಪಟದ ಮೊಹಬ್ಬತ್
ಸುದ್ದಿ/ಗಾಸಿಪ್
Feedback Print Bookmark and Share
 
ಹೌದು. ಇದು ಅಕ್ಷರಶಃ ನಿಜ. ಪ್ರೇಕ್ಷಕರು ನಿರಾಶರಾಗಿಲ್ಲ ಎನ್ನುವುದಕ್ಕಿಂತ ಯೋಗರಾಜ್ ಭಟ್ - ಗಣೇಶ್ ಜೋಡಿ ಪ್ರೇಕ್ಷಕರಿಗೆ ಅಪ್ಪಟ ಹದಿನಾರಾಣೆ ಮನರಂಜನೆ ನೀಡಿದೆ ಎಂಬುದು ಸೂಕ್ತ.

ಗಾಳಿಪಟ ಚಿತ್ರ ಬಿಡುಗಡೆಯಾಗುವಾಗ ಈ ಜೋಡಿ ತೀವ್ರ ಆತಂಕಕ್ಕೊಳಗಾಗಿತ್ತು. ಈಗಾಗಲೇ ಮುಂಗಾರು ಮಳೆ ಚಿತ್ರವನ್ನು ನೋಡಿರುವ ಪ್ರೇಕ್ಷಕ ಹೆಚ್ಚಿನ ನೀರೀಕ್ಷೆ ಇಟ್ಟುಕೊಂಡಿರುತ್ತಾನೆ ಎಂಬ ಅರಿವು ಅವರಲ್ಲಿತ್ತು. ಪತ್ರಿಕೆಯೊಂದರ ಮುಖಪುಟದಲ್ಲಿ ಕಂಡು ಬಂದ, ಚಿತ್ರದ ಆಶಯಗಳಿಗೆ ವಿರುದ್ಧವಾದ ವಿಮರ್ಶೆ ಚಿತ್ರರಸಿಕರನ್ನು ಕೊಂಚ ಗೊಂದಲಕ್ಕೀಡುಮಾಡಿದ್ದಂತೂ ಹೌದು.

ಆದರೆ ಪ್ರೇಕ್ಷಕನಿಗೆ ಚಿತ್ರ ಇಷ್ಟವಾಗಿದ್ದು, ಹಣ ಗಳಿಕೆಯಲ್ಲಿ ಗಾಳಿಪಟ ಹೊಸ ದಾಖಲೆ ಬರೆಯುತ್ತಿದೆ ಎಂಬಲ್ಲಿಗೆ ಪ್ರೇಕ್ಷಕನೇ ಚಿತ್ರದ ಅಸಲಿ ವಿಮರ್ಶಕ ಎಂಬುದು ಸಾಬೀತಾಗಿ ಹೋಗಿದೆ. ಮುಂಗಾರು ಮಳೆಯಲ್ಲಿ ಕೇವಲ ಗಣೇಶ್ ಜಾಲಿ ಜಾಲಿ ಡೈಲಾಗ್‌ಗಳು ಕೇಳಿ ಬಂದಿದ್ದವು. ಆದರೆ ಗಾಳಿಪಟದಲ್ಲಿರುವುದು ಮೂರು ಜೋಡಿ. ತರಲೆಗೆ, ತರಲೆ ಡೈಲಾಗ್‌ಗಳಿಗೇನೂ ಕಮ್ಮಿಯಿಲ್ಲ. ಹುಡುಗರಿಗೆ ಇಷ್ಟವಾಗಿರೋದೂ ಅದೇ ಎಂಬುದೇ ಗಾಳಿಪಟದ ಯಶಸ್ಸಿನ ಸೂತ್ರ.

ಇಷ್ಟೆಲ್ಲಾ ಆದ ಮೇಲೆ ಹೊಸ ಹೊಸ ಆಫರ್ಗಳು ಬರದೇ ಇದ್ದೀತೇ? ಯೋಗರಾಜಭಟ್ಟರೀಗೀಗ ತೆಲುಗು ಚಿತ್ರ ನಿರ್ದೇಶಿಸುವ ಯೋಗ ಬಂದಿದೆಯಂತೆ. ಅದೂ ಅಂತಿಂಥಾ ಚಿತ್ರವಲ್ಲ, ಮೆಗಾಸ್ಟಾರ್ ಚಿರಂಜೀವಿಯ ಚಿತ್ರ. ಚಿತ್ರ ಬಂತು ಎಂದು ಭಟ್ಟರೂ ಕಣ್ಣು ಮುಚ್ಚಿಕೊಂಡು ಎಸ್ ಎಂದಿಲ್ಲ. ಹೊಸ ನಟರನ್ನು ನಿರ್ದೇಶಿಸುವುದಕ್ಕೂ, ಈಗಾಗಲೇ ಇಮೇಜುಗಳಲ್ಲಿ ಬಂದಿಗಳಾಗಿರುವ ಸ್ಟಾರ್‌ಗಳನ್ನು ನಿರ್ದೇಶಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಅವರಿಗೆ ಗೊತ್ತು. ಆದ್ದರಿಂದಲೇ ಸಾಕಷ್ಟು ಸಮಾಲೋಚನೆಗಳ ನಂತರ ಈ ಆಫರ್ ಒಪ್ಪೋಣ ಎನ್ನುವುದು ಅವರ ಲೆಕ್ಕಾಚಾರ.

ಅದು ಅವರ ಜಾಣತನ ಕೂಡಾ.