ಒರಟನಿಗೆಂದೇ ಪೂಜಾಳ ತಂದೇ...!!
ಬೆಂಗಳೂರು, ಗುರುವಾರ, 31 ಜನವರಿ 2008( 14:28 IST )
ಚಿತ್ರರಂಗದಲ್ಲಿ ಒಂದು ಹಂತ ದಾಟಿದ ಮೇಲೆ ಕೆಲವರು ಹೊಸಬರೊಂದಿಗೆ ನಟಿಸಲು ಹಿಂಜರಿಯುತ್ತಾರೆ. ಇದರಿಂದ ತಮ್ಮ ಇಮೇಜು, ಸ್ಟೇಟಸ್ ಕಡಿಮೆಯಾಗುತ್ತದೆ ಎಂಬ ಅವ್ಯಕ್ತ ಭಯವೇ ಇದಕ್ಕೆ ಕಾರಣ. ಆದರೆ ಇಂಥ ನಿಲುವುಗಳಿಗೆ ಮಣೆ ಹಾಕದ ಪೂಜಾ ಗಾಂಧಿ ಹೊಸಬರೊಂದಿಗೆ ನಟಿಸುವ ಮೂಲಕ ಹೊಸ ದಾರಿ ತುಳಿದಿದ್ದಾರೆ.
ಒರಟ ಐ ಲವ್ ಯೂ ಎಂಬ ಚಿತ್ರದಲ್ಲಿ ಹೆಸರು ಮಾಡಿದ ನಾಯಕ ಪ್ರಶಾಂತ್ ಜೊತೆ ಪೂಜಾ ನಟಿಸಲಿದ್ದಾರೆ. ಮಹರ್ಷಿ ಎಂಬ ಹೆಸರಿನ ಈ ಚಿತ್ರವನ್ನು ರಾಮಕೃಷ್ಣ ನಿರ್ಮಿಸಲಿದ್ದು, ಈ ಹಿಂದಿನ ಅವರ ಯುಗಾದಿ ಚಿತ್ರದ ನಷ್ಟವನ್ನು ಇದು ತುಂಬಿಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಫೆಬ್ರವರಿ 18 ರಂದು ಪ್ರಾರಂಭವಾಗಲಿರುವ ಈ ಚಿತ್ರವನ್ನು ಬ್ರಹ್ಮ ನಿರ್ದೇಶಿಸಲಿದ್ದು ಹೊಸ ಹುಡುಗರ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.