ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೂರ್ಯ-ಸುಪ್ರೀತರ ರೀಲ್ ಮ್ಯಾರೇಜ್
ಸುದ್ದಿ/ಗಾಸಿಪ್
Feedback Print Bookmark and Share
 
ಯುವ ಪ್ರೇಮಿಗಳ ವಿವಾಹಕ್ಕೆ ಮನೆಯ ಹಿರಿಯರು ವಿರೋಧಿಸುವುದು, ಅದಕ್ಕೆ ಈ ಎರಡೂ ಜೀವಗಳು ರೋಧಿಸುತ್ತಾ ಮುಂದೇನು ದಾರಿ ಎಂದು ತೋಚದೆ ಕುಳಿತುಕೊಂಡಿರುವಾಗ ಯಾವುದೋ ಮತ್ತೊಂದು ಜೀವ ಇವರಿಬ್ಬರ ಮದುವೆಗೆ ನೆರವಾಗುವುದು ಹಲವು ಚಿತ್ರಗಳಲ್ಲಿ ಈಗಾಗಲೇ ನೀವು ನೋಡಿರುವ ಕಥೆ.

ಈ ಬಗೆಯ ಕತೆಗಳು ಕನ್ನಡ ಚಿತ್ರಗಳೂ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅದೆಷ್ಟು ಬಂದುಹೋಗಿದೆಯೋ. ಅದರೇನು? ಪ್ರೇಮ ಅಮರ ಅನ್ನುವ ಹಾಗೆ ಪ್ರೇಮಕಥೆಗಳಿಗೂ ಸಾವಿಲ್ಲ ಎನ್ನುವ ಮಾತನ್ನು ನಂಬುವುದಾದರೆ ತಗೊಳ್ಳಿ ಇನ್ನೊಂದು ಹೊಸ ಚಿತ್ರ. ಬಂದೇ ಬರ್ತಾಳೆ ಎಂಬ ಚಿತ್ರವೊಂದು ಸದ್ದಿಲ್ಲದೇ ಶುರುವಾಗಿದ್ದು, ಸೂರ್ಯ ಹಾಗೂ ಸುಪ್ರೀತಾ ಅದರಲ್ಲಿ ಯುವ ಪ್ರೇಮಿಗಳ ಪಾತ್ರ ವಹಿಸುತ್ತಿದ್ದಾರೆ.

ಮದುವೆಗೆ ನಾಯಕಿಯ ಮನೆಯವರ ವಿರೋಧ ಎದುರಾದಾಗ, ನೀವಿಬ್ಬರೂ ಎಲ್ಲಾದರೂ ದೂರ ಹೋಗಿ ಮದುವೆಯಾಗಿ ಎಂದು ಸ್ವತಃ ನಾಯಕನ ತಾಯಿಯೇ ಆಶೀರ್ವದಿಸುವ ದೃಶ್ಯವನ್ನು ಈ ಚಿತ್ರಕ್ಕಾಗಿ ಮೇಲುಕೋಟೆಯಲ್ಲಿ ಚಿತ್ರೀಕರಿಸಲಾಯಿತು. ಈ ಚಿತ್ರಕ್ಕೆ ದೇವು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಒದಗಿಸಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಇತರ ತಾರಾಗಣದಲ್ಲಿ ಶೋಭರಾಜ್, ಸಂತೋಷ್, ಪದ್ಮಾವಸಂತಿ ಮೊದಲಾದವರಿದ್ದಾರೆ.