ಮೇಘ ಮಾತಾಡಿತು
ಬೆಂಗಳೂರು, ಶುಕ್ರವಾರ, 1 ಫೆಬ್ರವರಿ 2008( 11:37 IST )
ಮೇಘ ಘರ್ಜಿಸುವುದನ್ನು ಕೇಳಿದ್ದೀವಿ, ಇದ್ಯಾವಾಗ ಮಾತಾಡ್ತಪ್ಪಾ ಅಂದುಕೊಳ್ಳುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಖ್ಯಾತ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ನಿರ್ದೇಶಿಸುತ್ತಿರುವ ಮೇಘವೇ ಮೇಘವೇ ಚಿತ್ರದ ಚಿತ್ರೀಕರಣ ನೇಪಾಳ ಹಾಗೂ ಕುಲು ಮನಾಲಿ ಪ್ರದೇಶಗಳ ರಮ್ಯತಾಣಗಳಲ್ಲಿ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ಹಂತವನ್ನು ತಲುಪಿದೆ.
ಲಗಾನ್ ಹಾಗೂ ಮುನ್ನಾಭಾಯಿ ಎಂಬಿಬಿಎಸ್ ಎಂಬೆರಡು ಹಿಂದಿ ಚಿತ್ರಗಳಲ್ಲಿ ಮಿಂಚಿದ ಬೆಡಗಿ ಗ್ರೇಸಿಸಿಂಗ್ ಈ ಚಿತ್ರದಲ್ಲಿ ನೇಪಾಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಸುದೀಪ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೊತೆ ಜೊತೆಯಲಿ, ಕೃಷ್ಣ, ಗಾಳಿಪಟ ಚಿತ್ರಗಳ ಸಂಗೀತಕ್ಕಾಗಿ ಈಗಾಗಲೇ ಜನ ಮೆಚ್ಚುಗೆಗೆ ಪಾತ್ರರಾಗಿರುವ ಹರಿಕೃಷ್ಣ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಮಂಡ್ಯ ರಮೇಶ್, ಕರಿಬಸವಯ್ಯ, ಶೋಭರಾಜ್ ಮೊದಲಾದವರು ಇತರ ತಾರಾಗಣದಲ್ಲಿದ್ದು, ಮೂಡಲಮನೆ ಧಾರಾವಾಹಿ ಖ್ಯಾತಿಯ ಕೆ.ಎಸ್.ಎಲ್.ಸ್ವಾಮಿಯವರಿಗೆ ಈ ಚಿತ್ರದಲ್ಲಿ ಅಪರೂಪದ ಪಾತ್ರವಿದೆ ಎನ್ನಲಾಗುತ್ತಿದೆ.