ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮನಸುಗಳ ಮಾತು ಮಧುರ ವಯಸ್ಕರಿಗಾಗಿ
ಸುದ್ದಿ/ಗಾಸಿಪ್
Feedback Print Bookmark and Share
 
ಈ ಚಿತ್ರದ ಶೀರ್ಷಿಕೆಯನ್ನು ನೋಡಿ ಇದೊಂದು ಪ್ರೇಮ ಕಥಾನಕವಿರಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಚಿತ್ರಕ್ಕೆ ಎ ಪ್ರಮಾಣ ಪತ್ರ ದೊರೆತಿರುವುದು ಚಿತ್ರ ರಸಿಕರೂ ಸೇರಿದಂತೆ ನಿರ್ದೇಶಕ ಮಂಜು ಮಸ್ಕಲ್‌ಮಟ್ಟಿಯವರಿಗೂ ಅಚ್ಚರಿ ತಂದಿದೆ.

ಆದರೆ ಯಾವ ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡಬೇಕು, ಯಾವುದಕ್ಕೆ ಯು ಪ್ರಮಾಣ ಪತ್ರ ನೀಡಬೇಕು ಎಂಬ ಬಗ್ಗೆ ಸೆನ್ಸಾರ್ ಮಂಡಳಿಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿರುತ್ತವೆ. ಇದು ಚಿತ್ರೋದ್ಯಮದವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಈ ಕುರಿತು ಕೊಂಚ ಮುಂಜಾಗರೂಕತೆ ವಹಿಸಿದ್ದಿದ್ದರೆ ಪ್ರಾಯಶಃ ಕಥೆಯಲ್ಲಿ, ದೃಶ್ಯಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಯು ಪ್ರಮಾಣಪತ್ರವನ್ನೇ ಪಡೆಯಬಹುದಾಗಿತ್ತೇನೋ ಎಂಬುದು ಹಲವರ ಅಭಿಪ್ರಾಯ.

ಯು2 ವಾಹಿನಿಯಲ್ಲಿ ನಿರೂಪಕರಾಗಿದ್ದ ಆನಂದ್‌ರವರವರಿಗೆ ಇದು ಮೊದಲ ಚಿತ್ರವಾಗಿದ್ದು, ಇದು ಮುಗಿಯುವ ಮುಂಚೆಯೇ ಮತ್ತೊಂದು ಚಿತ್ರದ ಆಫರ್ ದೊರೆತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಹರಿಪ್ರಿಯಾ, ಅವಿನಾಶ್, ಭವ್ಯ, ಪವಿತ್ರಾ ಲೋಕೇಶ್ ಚಿತ್ರದ ಇತರ ತಾರಾಗಣದಲ್ಲಿದ್ದಾರೆ.