ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್‌ಗೆ ಒಂದು ಹಿಟ್ ಚಿತ್ರ ಬೇಕಾಗಿದೆ
ಸುದ್ದಿ/ಗಾಸಿಪ್
Feedback Print Bookmark and Share
 
ನಿರಂತರ ಸೋಲಿನ ದವಡೆಯಲ್ಲೇ ಪಯಣಿಸುತ್ತಿರುವ ನಾಯಕ ನಟ ಪ್ರೇಮ್‌ಗೆ ಒಂದು ಹಿಟ್ ಚಿತ್ರ ಬೇಕಿದೆ. ನೆನಪಿರಲಿ ಚಿತ್ರದ ಮೂಲಕ ಅಪಾರ ಅಭಿಮಾನಿ ವೃಂದವನ್ನು ಅದರಲ್ಲೂ ಮಹಿಳಾ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಪ್ರೇಮ್ ಈಗ ಕೊಂಚ ಹತಾಶೆಯಲ್ಲಿದ್ದಾರೆ ಎಂಬುದು ಈ ಬಣ್ಣದ ಲೋಕದ ಅನಿಶ್ಚಿತತೆಗೊಂದು ಉದಾಹರಣೆ.

ನೆನಪಿರಲಿ ಚಿತ್ರದ ನಂತರ ಬಂದ ಜೊತೆ ಜೊತೆಯಲಿ ಚಿತ್ರವನ್ನು ಬಿಟ್ಟರೆ ಮತ್ಯಾವುದೂ ಯಶಸ್ಸಿನ ರುಚಿ ಕಂಡಿರಲಿಲ್ಲ. ಪಲ್ಲಕ್ಕಿ, ಗುಣವಂತ, ಸವಿ ಸವಿ ನೆನಪು ಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸದಿದ್ದಾಗ ಪ್ರೇಮ್ ನೆಚ್ಚಿಕೊಂಡದ್ದು ರತ್ನಜಾರವರ ಹೊಂಗನಸು ಚಿತ್ರವನ್ನು.

ಆದರೆ ಹೊಂಗನಸು ಚಿತ್ರಕ್ಕೆ ಅಂಥಾ ಪ್ರೋತ್ಸಾಹ ಸಿಗದಿರುವುದು ಪ್ರೇಮ್‌ರನ್ನು ಆತ್ಮವಿಮರ್ಶೆಗೆ ತೊಡಗಿಸಿದೆ. ತಾವು ಎಡವಿದ್ದು ಎಲ್ಲಿ ಎಂಬುದನ್ನು ಅವಲೋಕನ ಮಾಡಿಕೊಳ್ಳುತ್ತಿರುವ ಸಹೃದಯಿ ಪ್ರೇಮ್‌ ಅವರೀಗೀಗ ಒಂದು ಉತ್ತಮ ಚಿತ್ರ ಬೇಕಾಗಿದೆ.

ಚಿತ್ರರಂಗದಲ್ಲಿರುವ ಖ್ಯಾತನಾಮರೂ ಕೂಡ ಒಂದಲ್ಲಾ ಒಂದು ಅವಧಿಯಲ್ಲಿ ವೈಫಲ್ಯದ ಸುಳಿಯಲ್ಲೇ ಸಿಕ್ಕವರು, ಇದಕ್ಕಾಗಿ ಹತಾಶರಾಗುವುದು ಬೇಡ ಎಂದು ಪ್ರೇಮ್‌ಗೆ ನೆನಪಿಸಿ ಅವರಿಗೆ ಬೆಸ್ಟ್ ವಿಷಸ್ ಹೇಳೋಣವೇ?