ಅಂದುಕೊಂಡಂತೆ ಆದರೆ ಅದೇ ಜಿಂದಗಿ!!
ಬೆಂಗಳೂರು, ಸೋಮವಾರ, 4 ಫೆಬ್ರವರಿ 2008( 16:02 IST )
ಚಿತ್ರ ನಿರ್ಮಾಣಕ್ಕೆ ಪ್ಲಾನ್ ಮಾಡುವಾಗ ಒಂದು ರೀತಿ ಇದ್ದದ್ದು, ಚಿತ್ರ ಬಂದ ಮೇಲೆ ಮತ್ತೆ ಬೇರೆಯದೇ ರೀತಿಯಲ್ಲಿ ಇರುತ್ತದೆ. ಇದು ಕೆಲವೊಮ್ಮೆ ಪ್ಲಸ್ ಪಾಯಿಂಟೂ ಹೌದು, ಮೈನಸ್ ಪಾಯಿಂಟೂ ಹೌದು. ಅಂದುಕೊಂಡದ್ದಕ್ಕಿಂತ ಚಿತ್ರ ಚೆನ್ನಾಗಿ ಮೂಡಿಬಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ?
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ, ಎ.ಟಿ.ಲೋಕೇಶ್ ನಿರ್ಮಾಣದ ಜಿಂದಗಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆಯಂತೆ. ಇದಕ್ಕೆ ಕಾರಣ ನಟ ಕಿಶೋರ್‌ಗೆ ವಿಭಿನ್ನ ಪಾತ್ರ ಸಿಕ್ಕಿದ್ದು ಮಾತಿಗಿಂತ ಭಾವನೆಗಳಿಗೆ ಹೆಚ್ಚು ಪ್ರಾಧಾನ್ಯತೆ ಇರುವ ಪಾತ್ರ ಅದಂತೆ.
ಈ ಚಿತ್ರದ ಸಂಗೀತ ನಿರ್ದೇಶಕರು ಮೈಸೂರು ಮೋಹನ್. ಸುಮಾರು 40 ವರ್ಷಗಳಿಂದ ಉದ್ಯಮದಲ್ಲಿರುವ ಮೋಹನ್ ಈಗಾಗಲೇ 75 ಚಿತ್ರಗಳಿಗೆ ಸಂಗೀತ ನೀಡಿದ್ದರೂ ಅವರ ಹೆಸರಿಗೆ ಪ್ರಚಾರ ಸಿಕ್ಕಿಲ್ಲ. ಕಾರಣ ಅವುಗಳಲ್ಲಿ ಬಹುತೇಕ ಚಿತ್ರಗಳ ಸಂಗೀತ ನಿರ್ದೇಶನದ ಹೆಸರು ಬೇರೆಯವರ ಪಾಲಾಗಿದೆ. ಇದು ಉದ್ಯಮದಲ್ಲಿ ಕಂಡು ಬರುತ್ತಿರುವ ಶೋಷಣೆಗೆ ಒಂದು ಉದಾಹರಣೆ ಎನ್ನಬಹುದೇನೋ?
ಇರಲಿ, ಜಿಂದಗಿ ಚಿತ್ರದಿಂದ ಎಲ್ಲರ ಜಿಂದಗಿ ಬೆಳಗಲಿ ಎಂದು ಹಾರೈಸೋಣ.