ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೊಂಬಾಟ್ ಗೆಟಪ್‌ನಲ್ಲಿ ವಾರಸ್ದಾರ ರವಿ ಬೆಳಗೆರೆ
ಸುದ್ದಿ/ಗಾಸಿಪ್
Feedback Print Bookmark and Share
 
ಮುದ್ರಣ ಮಾಧ್ಯಮದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಪತ್ರಕರ್ತ ರವಿ ಬೆಳಗೆರೆ ಈಗ ದೃಶ್ಯಮಾಧ್ಯಮದ ಡಾರ್ಲಿಂಗ್. ಕ್ರೈಂ ಧಾರಾವಾಹಿಯ ನಿರೂಪಣೆ, ಕಿರುತೆರೆಯ ನಟನೆಯೂ ಸೇರಿದಂತೆ ಹಲವು ಚಿತ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಬೆಳಗೆರೆ ತಮ್ಮ ವಿಶಿಷ್ಟ ಧ್ವನಿಯಿಂದಲೇ ಪ್ರಸಿದ್ಧರು.

ಅವರ ಅಭಿನಯದ ವಾರಸ್ದಾರ ಚಿತ್ರ ಈಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಗಡ್ಡಧಾರಿ ರವಿಬೆಳಗೆರೆ ಈ ಚಿತ್ರದಲ್ಲಿ ಗಿರಿಜಾ ಮೀಸೆಯ ಯಜಮಾನನಾಗಿ ಮಿಂಚಿರುವುದು ಕುತೂಹಲವನ್ನು ಮೂಡಿಸಿದೆ. ಚಿತ್ರದ ಪ್ರಮೋಗಳನ್ನು ನೋಡಿದರೆ ಈ ಚಿತ್ರದಲ್ಲಿ ನಾಯಗನ್ ಅಥವಾ ಗಾಡ್ಫಾದರ್ ಚಿತ್ರಗಳ ಛಾಯೆ ಇರಬಹುದಾ ಅನಿಸುತ್ತದೆ. ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಇಂಥಾ ಕಥೆಯ ಚಿತ್ರಗಳಿಗೆ ಮಾರಿಯೋ ಪೂಜೋನ್ ಗಾಡ್ಫಾದರ್ ಕಾದಂಬರಿಯೇ ಸ್ಪೂರ್ತಿಯಾಗುತ್ತದೆ ಎಂದು ಬೆಳಗೆರೆಯವರೂ ಹೇಳಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ರವಿಯವರನ್ನು ತಮ್ಮ ಗುರುಗಳೆಂದೇ ಹೇಳಿಕೊಳ್ಳುವ ಗುರು ದೇಶಪಾಂಡೆ ಈ ಚಿತ್ರದ ನಿರ್ದೇಶಕರು. ಈ ಚಿತ್ರದ ಧ್ವನಿಸುರುಳಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಂಗೀತ ನೀಡಿರುವ ರಾಜೇಶ್ ರಾಮನಾಥ್‌ರವರ ಬಗೆಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಚಿತ್ರ ಯಶಸ್ವಿಯಾದಲ್ಲಿ ಕನ್ನಡಕ್ಕೆ ಮತ್ತೊಬ್ಬ ಕ್ಯಾರೆಕ್ಟರ್ ಆರ್ಟಿಸ್ಟ್ ಸಿಕ್ಕಂತಾಗುತ್ತದೆ ಎಂಬುದು ಉದ್ಯಮದ ನೀರೀಕ್ಷೆ. ಹಾಗಾಗಲೆಂದು ನಾವೂ ಹಾರೈಸೋಣ.