ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಡಗರದಿ ಸಂಭ್ರಮಿಸಿ ಸತ್ಕರಿಸಿದ ಗಿರಿಕನ್ಯೆ
ಸುದ್ದಿ/ಗಾಸಿಪ್
Feedback Print Bookmark and Share
 
ಗಿರೀಶ್ ಕಾಸರವಳ್ಳಿಯವರ ಪ್ರಶಸ್ತಿ ವಿಜೇತ ಚಿತ್ರದಲ್ಲಿ ಅಭಿನಯಿಸಿ ತಾಯಿಸಾಹೇಬ ಎಂದು ಉದ್ಯಮದವರಿಂದ ಕರೆಸಿಕೊಂಡಿದ್ದರೂ ಜಯಮಾಲಾರವರು ಚಿತ್ರರಸಿಕರ ಪಾಲಿಗೆ ಇನ್ನೂ ಗಿರಿಕನ್ಯೆಯೇ. ಅದಕ್ಕೆ ಕಾರಣ ಕಾಲನ ಹೊಡೆತಕ್ಕೆ ಸಿಗದ ಅವರ ಚೆಲುವು, ಮುಗ್ಧತೆ. ಮಾತುಗಳಲ್ಲಿ ಹೊರಹೊಮ್ಮುವ ಪ್ರಾಮಾಣಿಕತೆ.

ಜಯಮಾಲಾ ಇತ್ತೀಚೆಗೆ ಪತ್ರಕರ್ತರಿಗೆಂದೇ ಸತ್ಕಾರ ಕೂಟವೊಂದನ್ನು ಏರ್ಪಡಿಸಿದ್ದರು. ತಮಗೆ ಡಾಕ್ಟರೇಟ್ ಸಿಕ್ಕಿದ್ದಕ್ಕಾಗಿ ಸಂಭ್ರಮಿಸಿ ನೀಡಿದ ಸತ್ಕಾರವದು. ಬಂದವರಿಗೆಲ್ಲಾ ಕರಾವಳಿಯ ಒತ್ತುಶ್ಯಾವಿಗೆ ಮತ್ತು ಕಾಯಿಹಾಲಿನ ಓತಣ ನೀಡಿ ಉಪಚರಿಸಿದ ಜಯಮಾಲಾ ಹಾಗೂ ಅವರ ಪತಿ ರಾಮಚಂದ್ರ ಇಬ್ಬರೂ ಅಕ್ಷರಶಃ ಸಡಗರದಲ್ಲಿ ತೇಲುತ್ತಿದ್ದರು.

ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ಸಮಸ್ಯೆಯ ಕುರಿತು ಅಧ್ಯಯನ ನಡೆಸಿ ಜಯಮಾಲಾರು ಸಲ್ಲಿಸಿದ ಪ್ರಬಂಧಕ್ಕೆ ಜಯಮಾಲಾರಿಗೆ ಈ ಡಾಕ್ಟರೇಟ್ ಪದವಿ ಲಭಿಸಿದೆ ಎಂಬುದು ಒಂದು ವಿಶೇಷವಾದರೆ, ಹೀಗೆ ಪದವಿ ಪಡೆದ ಮೊದಲ ಕನ್ನಡ ನಟಿ ಈಕೆ ಎಂಬುದು ಹೆಮ್ಮೆಯ ವಿಚಾರ.