ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇಂತಿ ನಿನ್ನ ಪ್ರೀತಿಯ - ಥೇಟರ್‌ಗೆ ಯಾವಾಗ ಬರ್ತೀಯಾ!!
ಸುದ್ದಿ/ಗಾಸಿಪ್
Feedback Print Bookmark and Share
 
ನಿರ್ದೇಶಕ ಸೂರಿ ದುನಿಯಾ ಚಿತ್ರವನ್ನು ಲಾಂಚ್ ಮಾಡೋವಾಗ ಅವರ ಕುರಿತು ಜನಕ್ಕೆ ಅಷ್ಟೊಂದು ಮಾಹಿತಿಯಿರಲಿಲ್ಲ, ಉದ್ಯಮಕ್ಕೂ ಅವರ ಪ್ರತಿಭೆ ಗೊತ್ತಿರಲಿಲ್ಲ. ಮಣಿ, ರಂಗ ಎಸ್ಎಸ್ಎಲ್‌ಸಿ ಚಿತ್ರಗಳಿಗೆ ಸಂಭಾಷಣೆ ಬರದಿದ್ದಾರಂತೆ ಅನ್ನುವುದೊಂದೇ ಹೊರಬಿದ್ದಿದ್ದ ವಿಷಯ.

ಆದರೆ ಚಿತ್ರದ ವಾಲ್‌ಪೋಸ್ಟರ್‌ಗಳು ಹಾಗೂ ವಾಹಿನಿಗಳಲ್ಲಿ ದುನಿಯಾದ ಪ್ರಮೋಗಳು ಬರುತ್ತಿದ್ದಂತೆ ಸೂರಿಯ ಸೃಜನಶೀಲತೆ ಎಲ್ಲರ ಅರಿವಿಗೆ ಬಂತು. ಸೂರಿ ಸ್ವತಃ ಒಬ್ಬ ಚಿತ್ರಕಾರರಾಗಿದ್ದರಿಂದ ಈ ಥರದ ಐಡಿಯಾಗಳಿಗೇನೂ ಕೊರತೆಯಿರಲಿಲ್ಲ.

ಈಗ ಇತಿ ನಿನ್ನ ಪ್ರೀತಿಯ ಎಂಬ ಅವರ ಎರಡನೇ ಚಿತ್ರವನ್ನು ಚಿತ್ರರಸಿಕರು ಕುತೂಹಲದಿಂದ ಎದಿರುನೋಡುವಂತಾಗಿದೆ. ಇದಕ್ಕೆ ಕಾರಣ ಒನ್ಸ್ ಎಗೇನ್ ಚಿತ್ರದ ಪ್ರಮೋ ಮತ್ತು ಹಾಡುಗಳು. ಮಾಮೂಲಿ ಕಮರ್ಷಿಯಲ್ ಚಿತ್ರಗಳ ಧಾಟಿಯಲ್ಲಿರದ ಅವು ಒಂದು ಚಿತ್ರಿಕೆಯಲ್ಲೇ ಹಲವು ಅರ್ಥಗಳನ್ನು ಹೇಳುವುದು ಅವುಗಳ ವೈಶಿಷ್ಟ್ಯ.

ದುನಿಯಾ ಚಿತ್ರದಲ್ಲಿ ಮಾಡಿದ ಸಣ್ಣಪುಟ್ಟ ತಪ್ಪುಗಳನ್ನು ಈ ಚಿತ್ರದಲ್ಲಿ ತಿದ್ದಿಕೊಂಡಿರುವೆ ಎಂದು ನಿರ್ದೇಶಕ ಸೂರಿ ಹೇಳಿರುವುದು ನಿರೀಕ್ಷೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾವನಾ ಹಾಗೂ ಸೋನುರವರು ನಾಯಕಿಯರಾಗಿ ನಟಿಸಿದ್ದಾರೆ, ಆಕರ್ಷಣೆ ಹೆಚ್ಚಿಸಲು ಇದು ಸಾಕಲ್ಲವೇ?