ಕುಸುಮ ಅರ್ಜುನ್‌ಗೆ ಲೈಫ್ ಕೊಡುತ್ತಾ?
ಬೆಂಗಳೂರು, ಬುಧವಾರ, 6 ಫೆಬ್ರವರಿ 2008( 14:41 IST )
ಬಾಲ ಕಲಾವಿದರಾಗಿದ್ದವರಿಗೆ ಅದೇನು ಶಾಪವೋ ಗೊತ್ತಿಲ್ಲ. ಕೆಲವು ಉದಾಹರಣೆಗಳನ್ನು ಹೊರತುಪಡಿಸಿದರೆ ಅವರು ನಾಯಕರಾಗಿ ಯಶಸ್ಸು ಕಾಣುವುದು ಅಪರೂಪ ಎಂಬ ಮಾತುಗಳು ಉದ್ಯಮದಲ್ಲಿ ಆಗಾಗ ತೇಲಿ ಬರುತ್ತವೆ. ವಿನಾಯಕ ಜೋಷಿಯವರನ್ನು ಈ ನಿಟ್ಟಿನಲ್ಲಿ ನೆನೆಸಿಕೊಳ್ಳಬಹುದು.
ಪ್ರಭಾತ್ ಕಲಾವಿದರ ಕುಟುಂಬಕ್ಕೆ ಸೇರಿದ ಅರ್ಜುನ್ ಒಂದು ಕಾಲಕ್ಕೆ ಬಾಲ ಕಲಾವಿದರಾಗಿದ್ದವರೇ. ಡಾ| ರಾಜೇಂದ್ರ ಮೊದಲ್ಗೊಂಡು, ಡಾ|ವಿಷ್ಣುವರ್ಧನ್, ಅನಂತ್‌ನಾಗ್ ಹೀಗೆ ಎಲ್ಲರ ಚಿತ್ರದಲ್ಲೂ ಬಾಲ ಕಲಾವಿದರಾಗಿ ಪಾತ್ರ ನಿರ್ವಹಿಸಿರುವ ಈತ ಸದ್ಯಕ್ಕೆ ಯಶಸ್ಸಿನ ಹುಡುಕಾಟದಲ್ಲಿದ್ದಾರೆ.
ಈ ಹಿಂದೆ ಹೇಮಂತ್ ಹೆಗಡೆ ನಿರ್ದೇಶನದಲ್ಲಿ ಅಬ್ಬಬ್ಬಾ ಎಂಥಾ ಹುಡುಗ ಎಂಬ ಚಿತ್ರದಲ್ಲಿ ನಾಯಕ ಪಟ್ಟವನ್ನೇರಿದ್ದರೂ ಅದು ಅಂಥಾ ಯಶಸ್ಸು ಕಾಣಲಿಲ್ಲ. ನಾಯಕ ಪಾತ್ರಕ್ಕೆ ಬೇರೆಯವರೂ ಅವಕಾಶ ಕೊಡಲಿಲ್ಲ. ಸಂಪರ್ಕಿಸಿದ ಒಂದಿಬ್ಬರು ದುಡ್ಡು ಕೊಟ್ಟು ನಟಿಸುವಂತೆ ಕೇಳಿದಾಗ ಈತ ಹತಾಶಗೊಂಡದ್ದೂ ಇದೆ. ಇದನ್ನೆಲ್ಲಾ ದಾಟಿಕೊಂಡು ಈಗ ಕುಸುಮ ಎಂಬ ಚಿತ್ರದಲ್ಲಿ ಅರ್ಜುನ್ ನಟಿಸಿದ್ದು ಅದೀಗ ಬಿಡುಗಡೆಯಾಗಿದೆ. ಇದರ ಯಶಸ್ಸಿನ ಮೇಲೆ ಅರ್ಜುನ್ ಭವಿಷ್ಯ ನಿಂತಿದೆ.
ಹಾಲುಗಲ್ಲದ ಅರ್ಜುನ್‌ಗೆ ಹಾರೈಸೋಣ ನಾವೆಲ್ಲರೂ.