ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಫಣಿ ಮತ್ತೆ ಬಂದ!!
ಸುದ್ದಿ/ಗಾಸಿಪ್
Feedback Print Bookmark and Share
 
ಕಂಠೀರವ ಸ್ಡುಡಿಯೋದ ಆವರಣದಲ್ಲಿರುವ ಒಂದು ಬೆಂಚ್‌ಗೆ ಪತ್ರಕರ್ತ ಮಿತ್ರರೆಲ್ಲಾ ತಮಾಷೆಯಾಗಿ ಫಣಿ ರಾಮಚಂದ್ರ ಬೆಂಚ್ ಎಂತಲೇ ಕರೆಯುತ್ತಿದ್ದ ದಿನಗಳಿದ್ದವು.

ತಮ್ಮ ಚಿತ್ರದ ಪಾತ್ರಧಾರಿಗಳನ್ನು ಅದರ ಮೇಲೆ ಕೂರಿಸಿ, ಸಕ್ಸಸ್ ಎಂಬ ಡೈಲಾಗ್ ಅನ್ನು ಅವರಿಂದ ಹೇಳಿಸಿ ಆ ದೃಶ್ಯವನ್ನು ಚಿತ್ರದಲ್ಲಿ ಫಣಿ ರಾಮಚಂದ್ರರವರು ಬಳಸುತ್ತಿದ್ದುದು ಸಾಮಾನ್ಯವಾಗಿತ್ತು. ಆ ಬೆಂಚ್ ಮೇಲೆ ಚಿತ್ರೀಕರಣ ನಡೆಸಿದರೆ ಚಿತ್ರ ಯಶಸ್ವಿಯಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.

ಒಂದು ಹಂತದಲ್ಲಿ ಇದು ನಿಜವೂ ಆಗಿತ್ತು. ಅವರ ನಿರ್ದೇಶನದ ಗಣೇಶನ ಮದುವೆ, ಗೌರಿ ಗಣೇಶ, ಗಣೇಶ-ಸುಬ್ರಹ್ಮಣ್ಯ ಇವೇ ಮೊದಲಾದ ಗಣೇಶ ಸೀರೀಸ್ ಚಿತ್ರಗಳು ಅವರಿಗೆ ಹೆಸರನ್ನು ತಂದುಕೊಟ್ಟಿದ್ದವು. ಆದರೆ ಕೆಲ ಸಮಯ ಚಿತ್ರರಂಗದಿಂದ ದೂರವಾಗಿ ಟಿವಿ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದ ಫಣಿಯವರಿಗೆ ಕೈತುಂಬಾ ಕೆಲಸ ಸಿಕ್ಕಿತೇ ವಿನಃ ಹೆಸರು ಬರಲಿಲ್ಲ.

ಈಗ ಮತ್ತೊಮ್ಮೆ ಚಿತ್ರರಂಗದೆಡೆ ಮುಖ ಮಾಡಿರುವ ಫಣಿ ರಾಮಚಂದ್ರ ಗಣೇಶ ಮತ್ತೆ ಬಂದ ಎಂಬ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಫಣಿ ಮತ್ತೆ ಬಂದ ಎನ್ನುವುದೇ ಸೂಕ್ತ ಎಂಬುದು ಪತ್ರಕರ್ತ ಮಿತ್ರರ ತಮಾಷೆಯ ನುಡಿ. ವಿಜಯ ರಾಘವೇಂದ್ರರೊಂದಿಗೆ ಹಿರಿಯ ನಟ ಅನಂತ್‌ನಾಗ್‌ರವರೂ ಈ ಚಿತ್ರದಲ್ಲಿ ನಟಿಸಿದ್ದು, ಮಧ್ಯಮ ವರ್ಗದ ಬವಣೆ, ಸೆಂಟಿಮೆಂಟ್ ಹಾಗೂ ಹಾಸ್ಯ ಈ ಚಿತ್ರದಲ್ಲಿ ಹೇರಳವಾಗಿದೆ ಎನ್ನಲಾಗಿದೆ.

ಫಣಿಗೆ ಮರುಸ್ವಾಗತ ಕೋರೋಣವೇ?