ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಾಯ್ಸ್ ಆಫ್ ಕರ್ನಾಟಕ ಎಂಬ ಕೋಗಿಲೆ ಬೇಟೆ ಕಾರ್ಯಕ್ರಮ
ಸುದ್ದಿ/ಗಾಸಿಪ್
Feedback Print Bookmark and Share
 
ಇಂದು ನಾ ಹಾಡಿದರೆ ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನಾ, ಹಾಡುಹಕ್ಕಿಗೆ ಬೇಕೇ ಬಿರುದು ಸನ್ಮಾನಾ ಎಂಬ ಡಾ|| ಜಿ.ಎಸ್.ಶಿವರುದ್ರಪ್ಪನವರ ಹಾಡನ್ನು ವ್ಯಾವಹಾರಿಕವಾಗಿ ಯಾರೂ ಇಷ್ಟಪಡುವುದಿಲ್ಲ ಎನಿಸುತ್ತದೆ. ಏಕೆಂದರೆ ಟ್ಯಾಲೆಂಟ್ ಹಂಟ್ ಹೆಸರಿನಲ್ಲಿ ಇಂದು ನಡೆಯುತ್ತಿರುವ ಗಾಯಕ ಗಾಯಕಿಯರ ಪ್ರತಿಭಾ ಪ್ರದರ್ಶನ ನೋಡಿದರೆ ಲೈಮ್‌ಲೈಟ್‌ಗೆ ಬರಲು ಏನೆಲ್ಲಾ ಸರ್ಕಸ್‌ಗಳು ನಡೆಯುತ್ತಿವೆ ಅನಿಸುತ್ತದೆ ಒಮ್ಮೊಮ್ಮೆ..!

ಅದೆಲ್ಲಾ ಒತ್ತಟ್ಟಿಗಿರಲಿ. ನೀವು ಪ್ರತಿಭಾವಂತರೆಂದು ಗೊತ್ತಾದರೆ ಎಳೆದು ಎಳೆದು ವೇದಿಕೆಗೆ ತರುವ ವಿಭಿನ್ನ ಪ್ರಯತ್ನಗಳಿಗೇನೂ ಈಗ ಕಮ್ಮಿಯಿಲ್ಲ. ಈ ಒಂದು ಕಾರ್ಯಕ್ಕೆ ಅಗ್ರಪಂಕ್ತಿ ಹಾಕಿಕೊಟ್ಟಿದ್ದು ಈ-ಟಿವಿ. ಅದು ತೋರಿಸಿದ ಹಾದಿಯಲ್ಲಿಯೇ ಉಳಿದ ಚಾನೆಲ್‌ಗಳೂ ಸಾಗುತ್ತಿವೆ ಎಂಬ ಮಾತು ಸುಳ್ಳಲ್ಲ. ಸದ್ಯಕ್ಕೆ ವಾಯ್ಸ್ ಆಫ್ ಕರ್ನಾಟಕ ಎಂಬ ಮತ್ತೊಂದು ಕಾರ್ಯಕ್ರಮವನ್ನು ಈ-ಟಿವಿ ಹಮ್ಮಿಕೊಂಡಿದ್ದು ಇದು ಇತರ ಸಂಗೀತ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದೆ ಎಂಬುದು ವಿಶೇಷ.

ಸಂಗೀತದ ಎಲ್ಲಾ ಪ್ರಾಕಾರಗಳಲ್ಲೂ ಸಾಧನೆ ಮಾಡಿರುವ 16-20 ವಯೋಮಾನದವರಿಗೆ ಈ ಸ್ಪರ್ಧೆ ಮೀಸಲು. ಈಗಾಗಲೇ ಪ್ರಾಥಮಿಕ ಹಂತದ ಸ್ಪರ್ಧೆಗಳು ನಡೆದಿದ್ದು ಕರ್ನಾಟಕದೆಲ್ಲೆಡೆಯಿಂದ ಬಂದ ಸುಮಾರು 350 ಸಂಗೀತ ಪ್ರತಿಭೆಗಳು ಇದರಲ್ಲಿ ಸ್ಪರ್ಧಿಗಳಾಗಿದ್ದಾರೆ. ಅಂತಿಮ ಹಂತದಲ್ಲಿ ಆಯ್ಕೆಯಾಗಿರುವ ಎಂಟು ಮಂದಿಯಲ್ಲಿ ವಿಜಯಶಾಲಿಗಳಾಗುವವರಿಗೆ ಗರಿಷ್ಠ ಎರಡು ವರ್ಷಗಳ ಸಂಗೀತ ಕಲಿಕೆಯ ಸೌಕರ್ಯ ಒದಗಿಸಿಕೊಡಲಿದೆಯಂತೆ ಈ-ಟಿವಿ.

ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುವುದು ಒಳ್ಳೆಯದಲ್ಲವೇ?