ಪೂಜಾರಿಯಿಂದ ಬಿಡ್ಡನಾದವ ಈಗ ಭಂಟನಾದ
ಬೆಂಗಳೂರು, ಗುರುವಾರ, 7 ಫೆಬ್ರವರಿ 2008( 13:02 IST )
ಆದಿ ಲೋಕೇಶ್‌ರನ್ನು ಈಗಲೂ ಎಲ್ಲರೂ ಬಿಡ್ಡ ಎಂದೇ ಕರೆಯುವುದುಂಟು. ಜೋಗಿ ಚಿತ್ರದಲ್ಲಿ ಅವರು ವಹಿಸಿದ ಬಿಡ್ಡನ ಪಾತ್ರ ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ಪ್ರಾಯಶಃ ಅವರಿಗೂ ಗೊತ್ತಿರಲಿಲ್ಲವೇನೋ? ಈ ಪಾತ್ರದಿಂದಾಗಿ ಪೂಜಾರಿ ಚಿತ್ರದ ನಾಯಕ ಪಾತ್ರ ಆದಿ ಲೋಕೇಶ್‌ಗೆ ಲಭಿಸಿ, ಅದರ ಹಾಡುಗಳು ಜನಪ್ರಿಯವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಆದಿ ಲೋಕೇಶ್ ಅಭಿನಯದ ಬಿಡ್ಡ ಮತ್ತು ಗ್ಯಾಂಗ್ ಲೀಡರ್ ಎಂಬ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅದರ ಸುದ್ದಿ ಅರಗಿಸಿಕೊಳ್ಳುವುದಕ್ಕೆ ಮುಂಚೆಯೇ ಭಂಟ ಎಂಬ ಹೊಸ ಚಿತ್ರದಲ್ಲೂ ಇವರು ಪಾತ್ರ ಗಿಟ್ಟಿಸಿರುವ ಸುದ್ದಿ ಸ್ಯಾಂಡಲ್‌ವುಡ್‌ನಿಂದ ಹೊರಬಿದ್ದಿದೆ. ಇಷ್ಟೇ ಅಲ್ಲದೇ ಪೆಟ್ರೋಲ್, ನಿಷೇಧಾಜ್ಞೆ ಎಂಬ ಚಿತ್ರಗಳಲ್ಲೂ ಆದಿಗೆ ಆಫರ್ ಬಂದಿದೆಯೆಂದ ಮೇಲೆ 2008ರ ವರ್ಷ ಇವರಿಗೆ ಲಕ್ಕಿ ಎನ್ನಬಹುದೇನೋ?
ಭಂಟ ಆಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ರೂಪಶ್ರೀ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದುರ್ಗದ ಕೋಟೆಯ ವಿವಿಧ ಭಾಗಗಳಲ್ಲಿ ಕನ್ನಡ ಅಭಿಮಾನದ ಹಾಡೊಂದು ಇತ್ತೀಚೆಗೆ ಚಿತ್ರೀಕರಣಗೊಂಡಿದೆ ಎಂಬಲ್ಲಿಗೆ ರಾಜ್ಯೋತ್ಸವದ ದಿನದಂದು ಪ್ರಸಾರವಾಗುವ ಭಾಗ್ಯ ಇದಕ್ಕೆ ಸಿಗಲಿದೆ ಎಂದು ಇಂದೇ ಹೇಳಬಹುದಲ್ಲವೇ?
ಭಂಟನಿಗೆ ಅಭಿಮಾನಿ ಪ್ರೇಕ್ಷಕರು ನೆಂಟರಾಗಲಿ.