ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸರಿಗಮಪ ಲಿಟ್ಲ್ ಚಾಂಪ್ಸ್: ಪುಟಾಣಿಗಳ ಪ್ರತಿಭೆ ಒರೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಮಕ್ಕಳು ಏನು ಮಾಡಿದರೂ ಚೆಂದ. ಪುಟ್ಟ ಮಕ್ಕಳ ತೊದಲ್ನುಡಿಗಳಿಗೆ ಮನಸೋಲದವರಿಲ್ಲ. ಅದರಲ್ಲೂ ಹಾಡು-ಸಂಗೀತದಂತಹ ಪ್ರತಿಭೆಯನ್ನು ಮಕ್ಕಳು ವೇದಿಕೆಯ ಮೇಲೆ ಪ್ರದರ್ಶಿಸಿದರೆ ಯಾರಿಗೆ ತಾನೇ ಮೆಚ್ಚಿಗೆಯಾಗೋಲ್ಲ ಹೇಳಿ?

ಝೀ ಕನ್ನಡ ವಾಹಿನಿಯವರು ಪ್ರಸ್ತುತ ಪಡಿಸುತ್ತಿರುವ ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಈ ಪ್ರತಿಭೆಯ ಜ್ವಾಲಾಮುಖಿಗಳು ಎಷ್ಟು ಕುತೂಹಲ ಕೆರಳಿಸಿವೆ ಎಂದರೆ ಈ ಮಕ್ಕಳಲ್ಲಿ ಈ ಮಟ್ಟದ ಅಸಾಮಾನ್ಯ ಪ್ರತಿಭೆಯನ್ನು ತುಂಬಿದವರ್ಯಾರಪ್ಪಾ ಎಂಬಷ್ಟು. ಈ ಸ್ಪರ್ಧೆಗೆ ಕನಾಟಕದಾದ್ಯಂತ ಆಯ್ಕೆಯಾದ 18 ಪುಟಾಣಿಗಳಲ್ಲಿ ಈಗ 8 ಮಕ್ಕಳು ಮತ್ತೊಂದು ಸುತ್ತಿನ ಸ್ಪರ್ಧೆಯಲ್ಲಿವೆ.

ಓಹಿಲೇಶ್ವರಿ, ಆದರ್ಶ, ಸಹನಾ ಹೆಗ್ಡೆ, ಅಜಯ್ ಭಾರಧ್ವಾಜ್, ಹಿರಣ್ಮಯಿ, ಸಿದ್ದಾರ್ಥ, ಹಂಸಿನಿ ಹಾಗೂ ಅನಿರುದ್ಧ ಈ ಪ್ರತಿಭಾನ್ವಿತ ಮಕ್ಕಳಾಗಿದ್ದು, ಇವರ ನಡುವೆ ಈಗ ಟಾಪ್ 6ರ ಆಯ್ಕೆ ಬಾಕಿ ಉಳಿದಿದೆ. ನಾಳೆ ಮತ್ತು ನಾಡಿದ್ದು (ಫೆಬ್ರವರಿ 9 ಮತ್ತು 10) ಈ ಆಯ್ಕೆ ನಡೆಯಲಿದ್ದು ಅಭಿನಯ ಶಾರದೆ ಜಯಂತಿ ಮತ್ತು ನಟ ಆದಿ ಲೋಕೇಶ್ ಅವರು ಕ್ರಮವಾಗಿ ಈ ಎರಡು ದಿನಗಳಂದು ವಿಶೇಷ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಒಟ್ಟಿನಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಈಗ ಕುತೂಹಲಗಳ ಮೂಟೆ.