ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಸ್ಸಂಜೆಯ ಕಥಾ ಪ್ರಸಂಗ ಆಧರಿಸಿದ 'ಅವ್ವ'
ಸುದ್ದಿ/ಗಾಸಿಪ್
Feedback Print Bookmark and Share
 
ಮಾಮೂಲಿ ಚಿತ್ರ ನಿರ್ದೇಶಕರಿಗಿಂತ ಹೊರಳು ದಾರಿ ತುಳಿಯುವ ಪ್ರಯತ್ನ ಮಾಡಿದ್ದ ಕವಿತಾ ಲಂಕೇಶ್, ಆರಂಭದಲ್ಲಿ ಬಿಂಬ, ದೇವೀರಿಯಂಥ ಉತ್ತಮ ಚಿತ್ರಗಳನ್ನು ಕೊಟ್ಟಿದ್ದರು. ಪ್ರೀತಿ ಪ್ರೇಮ ಪ್ರಣಯ ಚಿತ್ರವೂ ಎಲ್ಲರ ಗಮನ ಸೆಳೆದಿತ್ತು. ತನನಂ ತನನಂ ಚಿತ್ರದ ಮೂಲಕ ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಅವರು ಮಾಡಿದ್ದ ಪ್ರಯತ್ನಕ್ಕೆ ಅಂಥಾ ಯಶಸ್ಸು ಸಿಗಲಿಲ್ಲ.

ಈಗ ಮತ್ತೊಮ್ಮೆ ಅವ್ವ ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಹಾಕುತ್ತಿದ್ದಾರೆ ಕವಿತಾ ಲಂಕೇಶ್. ಪಿ.ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ ಕಾದಂಬರಿ ಆಧರಿಸಿದ ಈ ಚಿತ್ರ ಎಷ್ಟರ ಮಟ್ಟಿಗೆ ಕಾದಂಬರಿಯ ಆಶಯಗಳನ್ನು ಅನಾವರಣಗೊಳಿಸಲಿದೆ ಎಂಬುದು ಈಗ ಹುಟ್ಟಿರುವ ನೀರೀಕ್ಷೆ. ಲಂಕೇಶರ ಗದ್ಯ ಶೈಲಿಯದೇ ಒಂದು ಸೊಗಸು. ಮುಸ್ಸಂಜೆಯ ಕಥಾಪ್ರಸಂಗ ಕಾದಂಬರಿ ಓದುತ್ತಿದ್ದರೆ ಒಂದು ಹಳ್ಳಿಯಲ್ಲಿನ ರಾಜಕೀಯ, ಸಣ್ಣತನಗಳು, ಗುಪ್ತಗಾಮಿನಿಯಂತೆ ಹರಿಯುವ ಪ್ರೇಮ ಪ್ರಕರಣಗಳು ಇವೆಲ್ಲಾ ಕಣ್ಣಿಗೆ ಕಟ್ಟುತ್ತವೆ. ಕಾದಂಬರಿ ಓದಿದವರಿಗೆ ಸಹಜವಾಗಿಯೇ ಚಿತ್ರದ ಕುರಿತು ಕುತೂಹಲವಿರುತ್ತದೆ.

ತನನಂ ತನನಂ ಚಿತ್ರದ ವೈಫಲ್ಯದ ನಂತರ ಕವಿತಾ ಲಂಕೇಶ್ ಅವರಿಗೂ ಒಂದು ಯಶಸ್ಸಿನ ಅಗತ್ಯವಿದೆ. ಅದೇ ರೀತಿ ಬ್ಯಾಡ್ರ ಮಂಜನ ಪಾತ್ರ ವಹಿಸಿರುವ ದುನಿಯಾ ವಿಜಯ್ ಅವರಿಗೂ ಒಂದು ಹಿಟ್ ಚಿತ್ರದ ಅಗತ್ಯವಿದೆ. ಏಕೆಂದರೆ ದುನಿಯಾ ನಂತರ ಬಂದ ಯುಗ ಹಾಗೂ ಚಂಡ ಚಿತ್ರಗಳು ಸೋಲುಂಡಿರುವುದರಿಂದ ಅವರ ಮುಂಬರುವ ಚಿತ್ರಗಳ ಯಶಸ್ಸಿಗೆ ಈ ಚಿತ್ರ ನಾಂದಿ ಹಾಡಬೇಕಿದೆ. ಕವಿತಾ ಲಂಕೇಶರ ಅವ್ವ ಚಿತ್ರ ಈ ನಿಟ್ಟಿನಲ್ಲಿ ಯಾರನ್ನೂ ನಿರಾಶೆಗೊಳಿಸದು ಎಂಬುದು ಹಲವರ ಅಭಿಪ್ರಾಯ.