ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಂದ್ರಶೇಖರ್ ನಿರ್ದೇಶನದ 'ಪಟ್ರೆ ಲವ್ಸ್ ಪದ್ಮ' ಚಿತ್ರೀಕರಣ ಪೂರ್ಣ
ಸುದ್ದಿ/ಗಾಸಿಪ್
Feedback Print Bookmark and Share
 
ಹೊಸ ಹೊಸ ಆಲೋಚನೆಗಳನ್ನು ಹೊತ್ತು ಚಿತ್ರರಂಗಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಲ್ಲೊಬ್ಬರು ಚಂದ್ರಶೇಖರ್ ಶ್ರೀವಾಸ್ತವ್. ಇವರ ನಿರ್ದೇಶನದ 'ಪಟ್ರೆ ಲವ್ಸ್ ಪದ್ಮ' ಚಿತ್ರದ ಚಿತ್ರೀಕರಣ ಮುಗಿದಿದೆ.

ಈ ಚಿತ್ರದಲ್ಲಿ ಐವರು ನಾಯಕಿಯರಿದ್ದಾರೆ. ಕಥಾನಾಯಕ ಪಟ್ರೆ ನಾಯಕಿಯನ್ನು ಹುಡುಕಿಕೊಂಡು ಅಲೆದಾಡುವಾಗ ಹಲವಾರು ಹುಡುಗಿಯರು ಅವನ ಜೀವನದಲ್ಲಿ ಹಾದುಹೋಗುತ್ತಾರೆ. ನಾಯಕ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ ಎನ್ನುತ್ತದೆ ಚಿತ್ರತಂಡ.

ನಾಯಕನ ಪಾತ್ರದಲ್ಲಿ ಅಭಿನಯಿಸಿರುವುದು ಅಜಿತ್. ಕೃತಿಕಾ, ದೀಪಿಕಾ, ವಿಜಯಲಕ್ಷ್ಮಿ, ಪವಿತ್ರಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಂದಿಬೆಟ್ಟದಲ್ಲಿ ಹಾಡಿನ ಚಿತ್ರೀಕರಣ ಮುಗಿಸಿರುವ ತಂಡ ಉಳಿದ ಕೆಲಸಗಳನ್ನು ನಡೆಸುವಲ್ಲಿ ಉತ್ಸುಕವಾಗಿದೆ. ಅದು ಮುಗಿದ ನಂತರ ಚಿತ್ರ ಆದಷ್ಟೂ ಬೇಗ ತೆರೆಗೆ ಬರಲಿದೆ.