ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಶ್ನಾರ್ಥಕ ಚಿಹ್ನೆ ಪ್ರೇಮ್ ವೈಫಲ್ಯವನ್ನು ದೂರ ಮಾಡಲಿದೆಯೇ?
ಸುದ್ದಿ/ಗಾಸಿಪ್
Feedback Print Bookmark and Share
 
ವೈಫಲ್ಯದಿಂದ ಹೊರಬರಲು ನಾಯಕನಟ ಪ್ರೇಮ್‌ಗೆ ಈಗೊಂದು ಹಿಟ್ ಚಿತ್ರದ ಜರೂರತ್ತಿದೆ ಎಂದು ಈ ಅಂಕಣದಲ್ಲಿ ಬರೆದಿದ್ದನ್ನು ನೀವು ನೋಡಿರಬಹುದು. ಅದೀಗ ಸನ್ನಿಹಿತವಾಗುವ ಕಾಲ ಬಂದಂತಿದೆ. ಚಿತ್ರದ ಹೆಸರೇನು ಗೊತ್ತೇ? ಕೇಳಿದರೆ ಆಶ್ಚರ್ಯವಾಗುತ್ತದೆ. "?" (ಪ್ರಶ್ನಾರ್ಥಕ ಚಿಹ್ನೆ) ಇದೇ ಚಿತ್ರದ ಹೆಸರು.

ಒಂದಕ್ಷರದ ಹೆಸರುಗಳನ್ನಿಡುವ ಪರಿಪಾಠ ಪ್ರಾರಂಭವಾದದ್ದು ಉಪೇಂದ್ರರಿಂದ. ಓಂ, ಶ್, ಸ್ವಸ್ತಿಕ್ ಚಿಹ್ನೆ ಹೀಗೆ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡಿದ್ದು ಉಪೇಂದ್ರರೇ. ಅದರ ಸಾಲಿಗೆ ಈ ಚಿತ್ರವೂ ಸೇರಲಿದೆ. ಬಹಳ ದಿನಗಳ ಹಿಂದೆಯೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡು ಮಧ್ಯದಲ್ಲಿ ಸ್ಥಗಿತಗೊಂಡಿತ್ತು. ಬಾಕಿಯಿದ್ದ ತಮ್ಮ ಭಾಗವನ್ನು ನಟ ಪ್ರೇಮ್ ಇತ್ತೀಚೆಗಷ್ಟೇ ಮುಗಿಸಿಕೊಡುವುದರೊಂದಿಗೆ ಚಿತ್ರದ ರೀರೆಕಾರ್ಡಿಂಗ್, ಡಬ್ಬಿಂಗ್, ಡಿಟಿಎಸ್ ಕಾರ್ಯಗಳೂ ಮುಗಿದಂತಾಗಿದೆ. ಚಿತ್ರ ಬಿಡುಗಡೆಯಾಗುವುದು ಬಾಕಿ.

ಮಳವಳ್ಳಿ ಸಾಯಿಕೃಷ್ಣರ ಸಾಹಿತ್ಯ, ವಿ.ಆನಂದ್ ಅವರ ಸಂಭಾಷಣೆಯಿರುವ ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಪ್ಯಾರಿಸ್ ಪ್ರಣಯ ಚಿತ್ರದಲ್ಲಿ ಗಮನ ಸೆಳೆದಿದ್ದ ರಘು ಮುಖರ್ಜಿ, ಗಿರಿಜಾ ಲೋಕೇಶ್, ತೃಷಾ ಪಾಂಡೆ, ಜಿ.ಕೆ.ಗೋವಿಂದರಾವ್ ತಾರಾಗಣದಲ್ಲಿರುವ ಇತರರು.

ಪ್ರಶ್ನಾರ್ಥಕ ಚಿಹ್ನೆಯ ಈ ಚಿತ್ರ ಪ್ರೇಮ್ ಪಾಲಿಗೆ ಪ್ರಶ್ನಾರ್ಥಕವಾಗಿ ಉಳಿಯದಿರಲಿ.