ಪಾರ್ವತಮ್ಮ ರಾಜ್‌ಕುಮಾರ್ ಮಡಿಲಿಗೆ ರಂಗಾಭರಣ ಪ್ರಶಸ್ತಿ
ಬೆಂಗಳೂರು, ಶನಿವಾರ, 9 ಫೆಬ್ರವರಿ 2008( 13:30 IST )
ನಗರದ ಖ್ಯಾತ ಪ್ರದರ್ಶಕ ಹಾಗೂ ಲಲಿತ ಕಲಾ ಶಾಲೆ ಕೊಡಮಾಡುವ ರಂಗಾಭರಣ ಪ್ರಶಸ್ತಿಗೆ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ರವರು ಆಯ್ಕೆಯಾಗಿದ್ದಾರೆ.
ಸಂಜಯನಗರದ ಕೆ.ಇ.ಬಿ. ಬಡಾವಣೆಯಲ್ಲಿ ಸಂಸ್ಥೆ ನೂತನವಾಗಿ ನಿರ್ಮಿಸಿರುವ ಚಂದ್ರಪ್ರಿಯ ರಂಗಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿದುಬಂದಿದೆ.
ಬೆಂಗಳೂರು ಉತ್ತರ ಭಾಗದಲ್ಲಿನ ರಂಗಮಂದಿರದ ಕೊರತೆಯನ್ನು ನೀಗಿಸಲು ಸಂಸ್ಥೆ ಈ ರಂಗಮಂದಿರವನ್ನು ನಿರ್ಮಿಸಿದ್ದು ಅವದೂತ ದತ್ತಪೀಠದ ಸ್ವಾಮೀಜಿ ಶ್ರೀ ವಿಜಯಾನಂದರು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯನವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಚಿತ್ರನಟ ರಾಘವೇಂದ್ರ ರಾಜ್ಕುಮಾರ್‌ರವರು ಭಾನುವಾರದ ಅಭಿನಯ ತರಗತಿಗಳನ್ನು ಉದ್ಘಾಟಿಸಲಿದ್ದಾರೆ.