ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಾಸರವಳ್ಳಿ ಕ್ಯಾಮರಾದಲ್ಲಿ ಗುಲಾಬಿ ಟಾಕೀಸ್
ಸುದ್ದಿ/ಗಾಸಿಪ್
Feedback Print Bookmark and Share
 
ಎಪ್ಪತ್ತರ ದಶಕ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ವರ್ಷ. ಸಂಸ್ಕಾರದಂತಹ ಸದಭಿರುಚಿಯ ಮತ್ತು ಪ್ರಶಸ್ತಿ ವಿಜೇತ ಚಿತ್ರ ಬಂದಿದ್ದು ಆಗಲೇ. ಅಂದಿನಿಂದ ಪ್ರಾರಂಭವಾದ ಸದಭಿರುಚಿಯ ಚಿತ್ರಗಳ ಪರಂಪರೆಯ ಕೊಂಡಿಗೆ ಅಲ್ಲಲ್ಲಿ ತಡೆಯುಂಟಾಗಿದೆಯಾದರೂ ಅವುಗಳ ನಿರ್ಮಾಣದೆಡೆಗಿನ ತುಡಿತವೇನೂ ಕಡಿಮೆಯಾಗಿಲ್ಲ.

ಎಂಥದೇ ಒತ್ತಡ ಬಂದರೂ ತಮ್ಮತನವನ್ನು ಬಿಟ್ಟುಕೊಡದ ನಿರ್ದೇಶಕರೆಂದೇ ಹೆಸರಾದವರು ನಿರ್ದೇಶಕ ಗೀರೀಶ್ ಕಾಸರವಳ್ಳಿ. ಘಟಶ್ರಾದ್ಧದಂತಹ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ರಾಜ್ಯದ, ದೇಶದ ಅಷ್ಟೇ ಏಕೆ ಅಂತಾರಾಷ್ಟ್ತ್ರೀಯ ಚಿತ್ರರಂಗದ ಗಮನ ಸೆಳೆದ ಗೀರೀಶ್ ಮನಸ್ಸು ಮಾಡಿದ್ದರೆ ಕಮರ್ಷಿಯಲ್ ಚಿತ್ರಗಳ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಿತ್ತು. ಆದರೆ ಅವರಿಗೆ ತಮ್ಮ ದಾರಿಯ ಕುರಿತು ಸ್ಪಷ್ಟ ಅರಿವಿತ್ತು. ಹೀಗಾಗಿ ಕುಬಿ ಮತ್ತು ಇಯಾಲ, ಕ್ರೌರ್ಯ, ತಾಯಿ ಸಾಹೇಬ, ದ್ವೀಪ, ನಾಯಿನೆರಳುನಂತಹ ಚಿತ್ರಗಳು, ಗೃಹಭಂಗದಂತಹ ಸದಭಿರುಚಿಯ ಧಾರಾವಾಹಿ ಅವರಿಂದ ಹೊರಹೊಮ್ಮಿದವು, ಪ್ರಶಸ್ತಿಗೆ ಪಾತ್ರವಾದವು.

ಗಿರೀಶ್ ಕಾಸರವಳ್ಳಿ ಮತ್ತೆ ತಮ್ಮ ಪ್ರತಿಭೆಯನ್ನು ಹೊರಚೆಲ್ಲಲಿದ್ದಾರೆ. ಉಮಾಶ್ರೀ ಪ್ರಧಾನ ಭೂಮಿಕೆಯಲ್ಲಿರುವ ಗುಲಾಬಿ ಟಾಕೀಸ್ ಎಂಬ ಚಿತ್ರ ಸೆನ್ಸಾರ್ ಆಗಿದ್ದು, ಆಗಸ್ಟ್ ವೇಳೆಗೆ ಬಿಡುಗಡೆಯಾಗಲಿದೆ. ಇವರು ನಿರ್ದೇಶಿಸಿರುವ ಎಲ್ಲಾ ಚಿತ್ರಗಳೂ ಒಂದಲ್ಲಾ ಒಂದು ಪ್ರಶಸ್ತಿಗೆ ಪಾತ್ರವಾಗಿವೆ. ಈಗಾಗಲೇ ನಾಲ್ಕು ಸ್ವರ್ಣ ಕಮಲಗಳು ಅವರ ತೆಕ್ಕೆ ಸೇರಿವೆ.

ಗುಲಾಬಿ ಟಾಕೀಸ್ ಯಾವ ಮೋಡಿ ಮಾಡಲಿದೆ ಎಂಬುದನ್ನು ನೋಡಲು ನೀವು ಆಗಸ್ಟ್ವರೆಗೂ ಕಾಯಬೇಕು.