ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಥಮ ಹಂತ ಮುಗಿಸಿದ ಸಿಟಿಜನ್
ಸುದ್ದಿ/ಗಾಸಿಪ್
Feedback Print Bookmark and Share
 
ಸಿಟಿಜನ್ ಚಿತ್ರವನ್ನು ಎಲ್ಲರೂ ಸಾಯಿದ್ವಯರ ಚಿತ್ರ ಎಂದೇ ಕರೆಯುತ್ತಿದ್ದಾರೆ. ಏಕೆಂದರೆ ಸಾಯಿಕುಮಾರ್ ನಾಯಕನಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದರೆ, ಸಾಯಿಪ್ರಕಾಶ್ ಚಿತ್ರದ ನಿರ್ದೇಶಕರು. ಗಣಿಧಣಿ ಜನಾರ್ಧನ ರೆಡ್ಡಿ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಳ್ಳುವುದರೊಂದಿಗೆ ಚಿತ್ರ ಈಗಾಗಲೇ ಸಂಚಲನೆಯನ್ನು ಮೂಡಿಸಿದೆ.

ಗಣರಾಜ್ಯೋತ್ಸವ ದಿನದಂದು ಪ್ರಾರಂಭವಾದ ಚಿತ್ರದ ಚಿತ್ರೀಕರಣ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಎರಡನೇ ಮತ್ತು ಮೂರನೇ ಹಂತದ ಚಿತ್ರೀಕರಣ ನಡೆಯಲಿದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ಚಿತ್ರ ಈಗಾಗಲೇ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಸಿ.ವಿ.ರೆಡ್ಡಿಯವರು ಈ ಚಿತ್ರದ ಮೂಲಕ ಕನ್ನಡ ಚಿತ್ರನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹಾಗೂ ಇದು ಸಾಯಿಕುಮಾರ್ ಅಭಿನಯದ 50ನೇ ಚಿತ್ರವಾಗಿರುವುದು ನೀರೀಕ್ಷೆಗಳ ಹೆಚ್ಚಳಕ್ಕೆ ಕಾರಣ. ಇದರೊಂದಿಗೆ, ತಂಗಿ ಚಿತ್ರಗಳ ಸ್ಪೆಷಲಿಸ್ಟ್ ನಿರ್ದೇಶಕ ಸಾಯಿಪ್ರಕಾಶ್ ಈ ಚಿತ್ರದ ಮೂಲಕ ಆಕ್ಷನ್ ಚಿತ್ರಗಳಲ್ಲಿ ಒಂದು ಕೈನೋಡಲು ಬಯಸಿದ್ದಾರೆ.

ಸಿಟಿಜನ್ ಚಿತ್ರಕ್ಕೆ ಕರ್ನಾಟಕದ ಸಿಟಿಜನ್‌ಗಳ ಪರವಾಗಿ ಶುಭ ಹಾರೈಸುವುದಷ್ಟೇ ನಮ್ಮ ಕೆಲಸ.