ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒರಟನಿಗೊಂದು ಕಾಲ, ಮಹರ್ಷಿಗೊಂದು ಕಾಲ
ಸುದ್ದಿ/ಗಾಸಿಪ್
Feedback Print Bookmark and Share
 
ಒರಟ ಚಿತ್ರ ಅಷ್ಟೊಂದು ಯಶಸ್ವಿಯಾಗದಿದ್ದರೂ ಅದರ ಹಾಡುಗಳು ಸೂಪರ್‌ಹಿಟ್ ಆಗಿರುವುದು ನಿಮಗೆಲ್ಲಾ ಗೊತ್ತು. ಈ ಮಾತು ನಾಯಕನಟ ಪ್ರಶಾಂತ್‌ಗೂ ಅನ್ವಯಿಸುತ್ತದೆ. ಅದರ ಫಲವಾಗಿ ಅವರಿಗೆ ಮತ್ತೊಂದು ಚಿತ್ರದಲ್ಲಿ ಅವಕಾಶ ಸಿಕ್ಕಿದೆ.

ಚಿತ್ರ ನಿರೂಪಣೆಯಲ್ಲಿ ತಮ್ಮದೇ ಆದ ವಿಧಾನವನ್ನು ಕಂಡುಕೊಂಡಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾರ ಸಹಾಯಕರಾಗಿದ್ದ ಕೃಷ್ಣಬ್ರಹ್ಮರವರು ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣ ಮಾಡಲಿದ್ದಾರೆ. ನಿಶ್ಚಿತಾರ್ಥ, ಪಾಂಡುರಂಗ ವಿಠಲ, ಯುಗಾದಿಯಂತಹ ಚಿತ್ರಗಳನ್ನು ನಿರ್ಮಿಸಿದ ಡಿ.ಕೆ.ರಾಮಕೃಷ್ಣ ಚಿತ್ರದ ನಿರ್ಮಾಪಕರು.

ಮಳೆ ಹುಡುಗಿ ಪೂಜಾಗಾಂಧಿ ನಾಯಕಿಯಾಗಿರುವ ಈ ಚಿತ್ರದ ಸಂಗೀತ ನಿರ್ದೇಶಕರು ಶ್ರೀಮುರಳಿ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆಯಂತೆ. ಇನ್ನೇನು ಸದ್ಯದಲ್ಲಿಯೇ ಸೆಟ್ಟೇರಲಿರುವ ಈ ಚಿತ್ರಕ್ಕೆ ಶುಭಾಶಯದ ಅಡ್ವಾನ್ಸ್ ಬುಕಿಂಗ್ ಮಾಡೋಣವೇ?!