ಚೆಲ್ಲಾಟದ ಹುಡುಗ ಗಣೇಶ್ ಈಗ ಮದುವೆ ಗಂಡು
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 10:15 IST )
ಹಲವು ಹೃದಯಗಳಲ್ಲಿ ಸಂಚಲನ ಮೂಡಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮದುವೆ ನಿರ್ಧಾರ ಹೊರಬಿದ್ದಿದ್ದು, ಈ ಕುರಿತ ಪ್ರಶ್ನೆಗಳ ಸುರಿಮಳೆಗೆ ಪೂರ್ಣ ವಿರಾಮ ಹಾಕಿದ್ದಾರೆ.
ಫೆ.18ರಂದು ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಂಗಳೂರು ಬೆಡಗಿ ಶಿಲ್ಪಾರನ್ನು ಮದುವೆಯಾಗುತ್ತಿದ್ದಾರೆ. ಈ ತಿಂಗಳ ಕಡೆವಾರದಲ್ಲಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿದು ಬಂದಿದೆ.
ಗಣೇಶ್ ಮದುವೆ ಬಗ್ಗೆ ಪೋಷಕರೇ ಮೊದಲು ಪ್ರಸ್ತಾಪ ಮಾಡಿ ಹಲವು ಹುಡುಗಿಯನ್ನು ನೋಡಿದ ಬಳಿಕ ಪೋಷಕರಿಗೆ ಒಪ್ಪಿಗೆಯಾಗಿದ್ದು ಶಿಲ್ಪಾ. ಇದಕ್ಕೆ ಗಣೇಶ್ ಒಪ್ಪಿಗೆ ಸೂಚಿಸಿದ ಬಳಿಕ ಮದುವೆ ದಿನಾಂಕ ನಿಗದಿ ಪಡಿಸಲಾಗಿತ್ತು.
ಚೆಲ್ಲಾಟದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಗಣೇಶ್ ನಟನೆ ಮಾಡಿರುವ ಅನೇಕ ಚಿತ್ರಗಳು ಹಿಟ್ ಆಗಿವೆ. ಅವರು ನಟಿಸಿರುವ ಮುಂಗಾರು ಮಳೆ ಚಿತ್ರ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿತ್ತು. ಚೆಲುವಿನ ಚಿತ್ತಾರ, ಗಾಳಿಪಟ ಮೊದಲಾದವುಗಳು ಸೂಪರ್ ಹಿಟ್ ಚಿತ್ರದಲ್ಲಿ ಅಭಿನಯಿಸಿರುವ ಗಣೇಶ್ ಈಗ ಮದುವೆ ಹುಡುಗ.