ನಂದ ಲವ್ಸ್ ನಂದಿತಾ...
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 11:48 IST )
ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ನಂದ ಲವ್ಸ್ ನಂದಿತಾ ಚಿತ್ರದ ಒಂದು ಗೀತೆಯಲ್ಲಿ ಜಿಂಕೆಮರಿಯನ್ನು ಮತ್ತೊಮ್ಮೆ ಎಳೆತರಲಾಗಿದೆ. ಜಿಂಕೆಮರಿನಾ ನೀ ಜಿಂಕೆಮರಿನಾ ಎಂದು ಸಾಗುವ ಈ ಹಾಡನ್ನು ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಆವರಣದಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.
ಈ ಹಾಡು ಅರವತ್ತರ ದಶಕದಲ್ಲಿ ಬಂದ ಕಪ್ಪು ಬಿಳುಪು ಚಿತ್ರವೊಂದರ ಜನಪ್ರಿಯ ಗೀತೆ. ಅಂದಿಗೇ ಏಕೆ ಇಂದಿಗೂ ಈ ಗೀತೆ ಪಾಪ್ಯುಲರ್. ಜಿಂಕೆಯ ಕಣ್ಣೆ ಚೆನ್ನಾ ಹವಳದ ಬಣ್ಣ ಚೆನ್ನಾ ಎಂದು ಶಂಕರ್‌ಗುರು ಚಿತ್ರದಲ್ಲಿ ಚಿ.ಉದಯಶಂಕರ್ ಗುನುಗಿದ್ದರು. ಈ ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲಾ, ಆ ಕಣ್ಣು, ಜಿಂಕೆ ಕಣ್ಣು ಎಂಬ ಸಾಲುಗಳ ಮೂಲಕ ಹಂಸಲೇಖಾರು ಕನವರಿಸಿದ್ದು ಪ್ರೇಮಲೋಕ ಚಿತ್ರದಲ್ಲಿ.
ತೀರಾ ಇತ್ತೀಚಿನ ಚಿತ್ರ ಎಂಬ ಚಿತ್ರದಲ್ಲಿ ಜಿಂಕೆಮರಿ ಬತ್ತೈತೆ ನೋಡ್ಲಾ ಮಗಾ ಎಂಬ ಹಾಡು ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಚಿತ್ರ ನೋಡಲು ಬರುವ ಪಡ್ಡೆಹುಡುಗರು ತಮಟೆಯೊಂದಿಗೆ ಬರುತ್ತಿದ್ದರು. ಗುರುಕಿರಣ್‌ರವರ ಸಂಗೀತ ಹುಡುಗರಿಗೆ ಅಷ್ಟೊಂದು ಹುಚ್ಚು ಹಿಡಿಸಿತ್ತು.
ಚಿತ್ರದ ನಿರ್ಮಾಪಕರು ರಮೇಶ್ ಕಶ್ಯಪ್. ಗೆಜ್ಜೆನಾದ ಚಿತ್ರದ ಯಶಸ್ಸನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿರುವ ವಿಜಯ್ ಕುಮಾರ್ ಚಿತ್ರದ ನಿರ್ದೇಶಕರು. ದುನಿಯಾ ಚಿತ್ರದ ಲೂಸ್‌ಮಾದ ಪಾತ್ರದ ಮೂಲಕ ಖ್ಯಾತರಾದ ಯೋಗೀಶ್ ಈ ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ ಎಂಬುದು ನಿಮಗೆಲ್ಲಾ ತಿಳಿದಿರುವ ವಿಷಯ.
ಜಿಂಕೆಯ ಕುಣಿತ ನೋಡಲು ನೀವು ಇನ್ನಷ್ಟು ದಿನ ತಾಳಲೇಬೇಕು. ತಾಳುವಿಕೆಗಿಂತನ್ಯ ತಪವು ಇಲ್ಲ ಎಂಬ ಮಾತು ಕೇಳಿಲ್ಲವೇ ಸ್ವಾಮೀ?!!