ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ವಿಜಯ ವೆಬ್‌ಸೈಟ್
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 12:19 IST )
ಚಲನಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಿನ್ನೆಲೆ ಗಾಯನ, ಅಭಿನಯ, ಚಲನಚಿತ್ರ ನೃತ್ಯ, ವಾದ್ಯ ಸಂಗೀತ, ನಿರ್ದೇಶನ ಇವೇ ಮೊದಲಾದ ವಿಭಾಗಗಳಲ್ಲಿ ಆಸಕ್ತರಿಗೆ ತರಬೇತಿ ನೀಡಿ ಚಿತ್ರರಂಗಕ್ಕೆ ಅನುಪಮ ಕಾಣಿಕೆ ಸಲ್ಲಿಸುತ್ತಿದೆ ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್. ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಗೊಂಡಿರುವ ಈ ಸಂಸ್ಥೆಗೆ ಕರ್ನಾಟಕ ಸರ್ಕಾರದಿಂದ ಅನುದಾನ ಸಿಗುತ್ತಿರುವುದು ಪ್ರತಿಷ್ಠೆಯ ವಿಷಯವೇ ಸರಿ.
ಸಮರ್ಪಣ ಮನೋಭಾವದ ಹಾಗೂ ಸಮರ್ಥ ಬೋಧಕ ಸಿಬ್ಬಂದಿಯನ್ನು ಒಳಗೊಂಡಿರುವ ಈ ಸಂಸ್ಥೆ ಈಗಾಗಲೇ ಹಲವಾರು ನಿರ್ದೇಶಕರು, ನಟ-ನಟಿಯರು, ತಂತ್ರಜ್ಞರನ್ನು ಉದ್ಯಮಕ್ಕೆ ನೀಡಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸಂಸ್ಥೆಯು www.cinemaplacement.com ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.
ಇದರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಲಭ್ಯವಿದ್ದು, ತಮ್ಮ ಹೆಸರನ್ನು ಇದರಲ್ಲಿ ನೋಂದಾಯಿಸಿಕೊಳ್ಳ ಬಯಸುವ ಹೊಸ ಪ್ರತಿಭೆಗಳು ಸಂಸ್ಥೆಯ ವತಿಯಿಂದ ನಡೆಸಲಾಗುವ ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.