ನಿರ್ದೇಶಕ ರತ್ನಜ ಯಾಕೋ ಸಿಟ್ಟಾಗಿದ್ದಾರೆ. ಹಾಗಂತ ಈ ಬಾರಿ ಅವರು ಸಿಟ್ಟಾಗಿರುವುದು ಯಾವುದೇ ಪತ್ರಕರ್ತರ ಮೇಲಂತೂ ಖಂಡಿತ ಅಲ್ಲ. ಬದಲಿಗೆ ಪೊಲೀಸರು ಮತ್ತು ರಕ್ಷಣಾ ಇಲಾಖೆಯವರ ಮೇಲೆ. ಅರೆ, ನಿರ್ದೇಶಕ ರತ್ನಜಾಗೂ ಪೊಲೀಸರಿಗೂ, ರಕ್ಷಣಾ ಇಲಾಖೆಯವರಿಗೆ ಎಲ್ಲಿನ ಸಂಬಂಧ ಎಂದು ಆಶ್ಚರ್ಯವಾಗಬಹುದು.
ಹೌದು, ಖಂಡಿತವಾಗಿ ಸಂಬಂಧ ಇದೆ. ಏನೆಂದರೆ ಹಿಂದೆ ಸೋಮೇಶ್ವರ ಮತ್ತು ಹಳೇಬೀಡಿನಲ್ಲಿ ಒಂದು ಹಾಡಿಗೆ ಶೂಟಿಂಗ್ ಮಾಡುತ್ತೀನಿ ಅನುಮತಿ ಕೊಡಿ ಎಂದು ಅಲ್ಲಿನ ಪೊಲೀಸ್ ಮತ್ತು ರಕ್ಷಣಾ ಇಲಾಖೆಯವರನ್ನು ಕೇಳಿಕೊಂಡಿದ್ದರಂತೆ. ಆದರೆ ಅವರು ಸುತಾರಾಂ ಸಾಧ್ಯವಿಲ್ಲ ಎಂದಿದ್ದರಂತೆ. ಆದರೆ ರಜನಿಕಾಂತ್ ಬಂದು ಶೂಟಿಂಗ್ ಮಾಡುತ್ತೇನೆ ಎಂದರೆ ತುಟಿಪಿಟಕ್ ಎನ್ನದೆ ಸಲೀಸಾಗಿ ಒಪ್ಪಿಕೊಳ್ಳುತ್ತಾರೆ ಎಂದು ರತ್ನಜ ಸಿಡಿದೆದಿದ್ದಾರೆ. ಕೆಲ ದಿನಗಳ ಹಿಂದೆ ರಜನಿಕಾಂತ್ ಚಿತ್ರ ನೋಡಿದಾಗ ಒಂದು ಹಾಡಿನ್ನು ಅಲ್ಲೇ ಚಿತ್ರೀಕರಿಸಲಾಗಿದೆ ಎಂದು ರತ್ನಜ ತಮ್ಮ ಆಕ್ರೌಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಕನ್ನಡ ಸಿನಿಮಾ ಚಿತ್ರೀಕರಣ ಮಾಡುತ್ತೇವೆ. ಅದೂ ಕನ್ನಡ ಕುರಿತ ಹಾಡು ಎಂದರೂ ಒಪ್ಪುವುದಿಲ್ಲ. ಆದರೆ ತಮಿಳಿನ ಚಿತ್ರಕ್ಕೆ ಅನುಮತಿ ನೀಡಿದ್ದಾರೆ. ಅದರಲೂ ಒಂದು ಹಾಡಿನ ಚಿತ್ರೀಕರಣ ಮಾಡುತ್ತೇವೆ ಎಂದರೂ ಕಿರಿಕಿರಿ ಮಾಡುತ್ತಾರೆ ಎಂದು ಪೊಲೀಸರು ಮತ್ತು ರಕ್ಷಣಾ ಇಲಾಖೆಯವರ ಮೇಲೆ ಕೋಪಗೊಂಡಿದ್ದಾರೆ.