ಇ ಪ್ರೀತಿ ಬೇಡವೆಂದ ದಿಗಂತ್
ಇ ಪ್ರೀತಿ ಚಿತ್ರದ ನಿರ್ದೇಶಕಿಗೆ ನಾಯಕ ದಿಗಂತ್ ಕೈಕೊಟ್ಟಿದ್ದಾರೆ. ಅವರಿಗೆ ಮನಸಾರೆ ಬೇಕು. ಆದರೆ ಈ ಪ್ರೀತಿ ಬೇಂಡಾಂತರೆ ದಿಗಂತ್.ಕಳೆದ ಡಿಸೆಂಬರ್‌ನಿಂದ ಮೂರು ಬಾರಿ ಕಾರಣ ಹೇಳಿ ತಪ್ಪಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಎರಡನೆಯ ಬಾರಿ ಕೈಕೊಟ್ಟಾಗ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆಗೇನೂ ದಿಗಂತ್ ಅಮೇರಿಕಾದಿಂದ ವಾಪಾಸ್ ಬಂದಿದ್ದರು. ಈಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಚಿತ್ರೀಕರಣಕ್ಕೆ ಮನಸಾರೆ ಕಾರಣ ಹೇಳಿ ನುಣುಚಿಕೊಂಡಿದ್ದಾರೆ. ದಿಗಂತ್‌ಗೆ ಗಾಂಧಿನಗರದಲ್ಲಿ ಅವಕಾಶವಿಲ್ಲದಾಗ ಬಂದಿದ್ದು ಈ ಪ್ರೀತಿ. ಕ್ರಮೇಣ ಅದೃಷ್ಟ ಖುಲಾಯಿಸಿ, ಒಂದಷ್ಟು ಚಿತ್ರಗಳಿಗೆ ನಾಯಕನಾದಾಗ ಇ ಪ್ರೀತಿಗೆ ಕೈಕೊಟ್ಟಿದ್ದಾರೆ. ದಿಗಂತ್‌ರಿಂದ ಎಷ್ಟು ಖರ್ಚಾಗಿದೆ ಗೊತ್ತಾ? ಶೂಟಿಂಗ್ ಎಂದು ದಿನ ನಿಗದಿ ಮಾಡಿದರೆ ಕ್ಯಾನ್ಸಲ್ ಮಾಡಿದ್ದೇವೆ. ಇದರಿಂದ ಸುಮ್ಮನೆ ಖರ್ಚು. ಈಗ ನೋಡಿದರೆ ನನ್ನ ಮೇಲೆ ನಿರ್ಮಾಪಕರಿಗೆ ಏನೋ ಹೇಳಿದ್ದಾರಂತೆ. ಚಿತ್ರ ಮುಗಿದರೆ ಸಾಕು ಎನ್ನುತ್ತಾರೆ ನಿರ್ದೇಶಕಿ ಪ್ರಿಯಾ.15
ರಿಂದ 20 ದಿನಗಳ ಚಿತ್ರೀಕರಣ ಬಾಕಿಯಿದೆ. ಜುಲೈ 15ರ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ದಿಗಂತ್ ಆಶ್ವಾಸನೆ ನೀಡಿದ್ದಾರೆ. ಏನಾಗುತ್ತೋ ಕಾದು ನೋಡಬೇಕು.