ಇವತ್ತು ಸಿನಿಮಾ ಬಿಡುಗಡೆ ಆಗಿದೆ ಎಂದರೆ ನಾಳೆ ನಾಡಿದ್ದು ಎನ್ನುವಷ್ಟರಲ್ಲಿ ಅದರ ಕರಡು ಪ್ರತಿಗಳು ಸದ್ದಿಲ್ಲದೆ ಹೊರಬೀಳುತ್ತಿವೆ. ಇಂತಹ ನಕಲಿ ಸಿಡಿ ಹಾವಳಿ ತಡೆಗಟ್ಟಲು ವಾಣಿಜ್ಯ ಮಂಡಳಿ ನಿರ್ಧರಿಸಿದ್ದರೂ, ಯಾವುದೇ ಪ್ರಯೋಜನವಿಲ್ಲ ಎನ್ನುವುದು ನಟ ಜಗ್ಗೇಶ್ ಅನಿಸಿಕೆ.
ವೆಬ್‌ಸೈಟ್ ಹಾಡುಗಳ ಹಾವಳಿಯನ್ನು ಕಿತ್ತೊಗೆಯದಿದ್ದರೆ ಆಡಿಯೋ ಮಾರುಕಟ್ಟೆ ಮತ್ತಷ್ಟು ಕುಸಿಯುತ್ತದೆ ಎನ್ನುವುದು ಅವರ ವಾದ. ಇತ್ತೀಚೆಗೆ ಬಿಡುಗಡೆಯಾದ ಎಲ್ಲಾ ಹಾಡುಗಳೂ ವೆಬ್‌ಸೈಟ್‌ಗಳಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಈ ಮೋಸ ಜಾಲವನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕೆಂಬುದು ಅವರ ಆಗ್ರಹ.
ಇದರ ಬಗ್ಗೆ ನಟ, ನಿರ್ದೇಶಕ ಬಿ.ಸಿ. ಪಾಟೀಲ್ ಗೂಂಡಾ ಕಾಯಿದೆ ಕೂಡಲೇ ಜಾರಿಗೆ ಬರುವಂತೆ ವಿಧಾನಸಭೆಯಲ್ಲಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಪಥ ಹಾಕಿದ್ದಾರೆ ಪಾಟೀಲ್.