ಭಾಗ್ಯದ ಬಳೆಗಾರ ಚಿತ್ರದ ಬಳಿಕ ಶಿವರಾಜ್ ಕುಮಾರ್ ದೇವರು ಕೊಟ್ಟ ತಂಗಿ ಮೂಲಕ ಅಳಿಸಲು ಬರುತ್ತಿದ್ದಾರೆ.
ಚಿತ್ರರಂಗದಲ್ಲಿ ಫ್ಯಾಮಿಲಿ ಡೈರೆಕ್ಟರ್ ಎಂದೇ ಹೆಸರಾಗಿರುವ ಓಂ ಸಾಯಿಪ್ರಕಾಶ್ ಇದರ ನಿರ್ದೇಶಕರು. ಈ ಹಿಂದೆ ಇದೇ ಹೆಸರಿನ ಕಪ್ಪುಬಿಳುಪು ಚಿತ್ರ ಬಿಡುಗಡೆಯಾಗಿದ್ದರೂ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ಸಾಯಿಪ್ರಕಾಶ್. ಗಡಿಬಿಡಿ ಕೃಷ್ಣ, ಗಡಿಬಿಡಿ ಅಳಿಯ, ತವರಿಗೆ ಬಾ ತಂಗಿ, ಗಲಾಟೆ ಅಳಿಯಂದ್ರು ಹೀಗೆ ಹಲವು ಸಿನಿಮಾದಲ್ಲಿ ಶಿವಣ್ಣ- ಸಾಯಿಪ್ರಕಾಶ್ ಜೊತೆಯಾಗಿ ಕೆಲಸ ಮಾಡಿದ್ದಾರೆ. ತಂಗಿಯಾಗಿ ಮೀರಾ ಜಾಸ್ಮಿನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಮೋನಿಕಾ ಕಾಣಿಸಿಕೊಳ್ಳುತ್ತಿದ್ದಾರೆ.
ಶಿವಣ್ಣ ಜೊತೆ ನಟಿಸಬೇಕು ಎನ್ನುವುದು ನನ್ನ ಬಹುದಿನದ ಕನಸಾಗಿತ್ತು. ಅದನ್ನು ಸಾಯಿಪ್ರಕಾಶ್ ನೆರವೇರಿಸಿದ್ದಾರೆ ಎನ್ನುತ್ತಾರೆ ಮಲೆಯಾಳಂ ಚೆಲುವೆ ಮೀರಾ ಜಾಸ್ಮಿನ್. ಅಂತೂ ಮತ್ತೊಂದು ಸೆಂಟಿಮೆಂಟಲ್ ಚಿತ್ರವನ್ನು ಪ್ರೇಕ್ಷಕ ಏನು ಹೇಳುತ್ತಾರೋ ಕಾದು ನೋಡಬೇಕು.