ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗೀಶರ ರಮ್ಯ ಧ್ಯಾನ (Yogeesh | Ramya | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Yogeesh
MOKSHA
ಲೂಸ್ ಮಾದ ಯೋಗೀಶರ ರಮ್ಯ ಧ್ಯಾನ ಇನ್ನು ನಿಂತ ಹಾಗೆ ಕಾಣುತ್ತಿಲ್ಲ. ಸ್ಯಾಂಡಲ್‌ವುಡ್ಡಿನಲ್ಲಿ ಬಿಡುವಿಲ್ಲದ ನಟನಿಗೆ ಈಗ ರಮ್ಯಾಗೆ ನಾಯಕನಾಗಬೇಕೆಂಬ ಹಂಬಲವಂತೆ.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗೀಶ್ ಇದೇ ಮಾತನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ನಾನು ರಮ್ಯಾ ಅಭಿಮಾನಿ. ಅವರು ಎದುರಿಗಿದ್ದರೆ ನನಗೆ ಮಾತೇ ಹೊರಡಲ್ಲ. ನನ್ನ ಮೊಬೈಲ್ ವಾಲ್‌ಪೇಪರ್‌ನಲ್ಲೂ ರಮ್ಯಾರ ಚಿತ್ರ ಹಾಕಿದ್ದೇನೆ. ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸಬೇಕೆನ್ನುವುದೇ ನನ್ನ ಅಭಿಲಾಷೆ ಎನ್ನುತ್ತಾರೆ ಯೋಗೀಶ್.

ಆದರೆ ಅದೇಕೋ ಕಾಲ ಕೂಡಿ ಬರುತ್ತಿಲ್ಲ. ಆದರೆ ತೆರೆಯ ಮೇಲೆ ತಮ್ಮ ಮತ್ತು ರಮ್ಯ ಜೋಡಿಯ ಕೆಮಿಸ್ಟ್ತ್ರಿ ಸಖತ್ತಾಗಿರುತ್ತದೆ ಎನ್ನುವ ಘೋಷಣೆಯೂ ಹೊರಬೀಳುತ್ತದೆ. ಆದರೆ ಹಲವರು ನಮ್ಮನ್ನು ಸಹೋದರ ಸಹೋದರಿ ಜೋಡಯಂತೆ ಕಾಣುತ್ತದೆ ಅನ್ನುತ್ತಾರೆ. ಏನು ಮಾಡೋಣ ಎಂದು ಯೋಗೀಶ್ ಅದೃಷ್ಟ ಹಳಿದುಕೊಳ್ಳತ್ತಾರೆ.

ಇತ್ತ ಯೋಗೀಶ್ರ ಮೂರು ಚಿತ್ರಗಳು ತೆರೆಗೆ ಸಿದ್ಧವಾಗಿದೆ. ಎರಡು ವಾರದಿಂದ ಹಿಂದೆ ಬಿಡುಗಡೆಯಾದ ಪ್ರೀತ್ಸೆ ಪ್ರೀತ್ಸೆ ಚಿತ್ರ ಬಾಕ್ಸ್ ಆಫೀಸ್ ತುಂಬಿಸಲು ವಿಫಲವಾಗಿದ್ದರೂ, ಸಾಕಷ್ಟು ಚಿತ್ರಗಳ ಸಾಲು ಸಾಲಾಗಿ ನಿಂತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗೀಶ್, ರಮ್ಯ, ಕನ್ನಡ ಸಿನಿಮಾ, ಲೂಸ್ ಮಾದ