ಮಹೇಶ್ ನಿರ್ದೇಶನದ ಇನಿಯ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಬಿಡುಗಡೆಗೊಳಿಸಿದರು.
ಮುಸ್ಸಂಜೆ ಮಾತು ಚಿತ್ರದ ಬಳಿಕ ಮತ್ತೊಂದು ಮೆಲೋಡಿಯಸ್ ಸಿನಿಮಾಗೆ ಸಂಗೀತ ಮಾಡಿದ್ದಾರೆ ಮಹೇಶ್. ಹಾಡುಗಳಿಗೆ ತಕ್ಕ ನೃತ್ಯ ನಿರ್ದೇಶನ, ಸಂಗೀತಕ್ಕೆ ತಕ್ಕ ನಿರ್ದೇಶನ ಮಾಡಿರುವ ಇವರು ಚಿತ್ರಕ್ಕೆ ಮುಸ್ಸಂಜೆ ಮಾತು ಚಿತ್ರದ ಹಾಡುಗಳೇ ಸ್ಪೂರ್ತಿ ಎನ್ನುತ್ತಾರೆ ಅವರು.
ಚಿತ್ರದ ನಿರ್ಮಾಣವನ್ನು ಶೈಲೇಂದ್ರ ಬಾಬು ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಾಲಾಜಿ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಪೂಜಾ ಗಾಂಧಿ ಅಭಿನಯಿಸುತ್ತಿದ್ದಾರೆ. ಶ್ರೀಧರ್ ಚೆನ್ನಾಗಿ ಹಾಡುಗಳನ್ನು ಮಾಡಿದ್ದಾರೆ, ಮಹೇಶ್ ಚೆನ್ನಾಗಿ ಚಿತ್ರ ಮಾಡಿದ್ದಾರೆ ಎಂದು ಮಾತು ಮುಗಿಸಿದರು ಬಾಲಾಜಿ.