ರಾಜ್ ಪುನೀತ್ ಅಭಿಮಾನಿಗಳಿಗೆ ಇದೀಗ ಬೇಸರದ ಸುದ್ದಿಯಿದೆ. ರಾಜ್ ದಿ ಶೋ ಮ್ಯಾನ್ ಚಿತ್ರ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಕಾಣಬೇಕಿತ್ತು. ಆದರೆ ಅದ್ಯಾಕೋ ಮುಂದೆ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಚಿತ್ರದ ಬಗ್ಗೆ ಹಬ್ಬಿರುವ ಊಹಾಪೋಹಾಗಳೇ ಇದಕ್ಕೆ ಸಾಕ್ಷಿಯಾಗಿದೆ.
MOKSHA
ಚಿತ್ರದ ಒಂದು ಹಾಡನ್ನು ಐಸ್ಲ್ಯಾಂಡ್ನಲ್ಲಿ ಚಿತ್ರೀಕರಿಸಲು ಯೋಜಿಸಿದ್ದರು ನಿರ್ದೇಶಕ ಪ್ರೇಮ್. ಆದರೆ ಅಲ್ಲಿ ಸಾಧ್ಯವಾಗದಿರುವುದಕ್ಕೆ ಲಡಾಖ್ನ ಹಿಮದಲ್ಲಿ ಚಿತ್ರೀಕರಿಸಲು ತಂಡ ತೆರಳಿದೆ. ಆದರೆ ಅಲ್ಲಿ ಆಕ್ಸಿಜನ್ ಕೊರತೆಯಿಂದ ಚಿತ್ರತಂಡ ಹಲವು ಸದಸ್ಯರು ಅಸ್ವಸ್ಥರಾಗಿದ್ದರಂತೆ. ಸ್ವತಃ ನಿರ್ದೇಶಕ ಪ್ರೇಮ್. ಹೀಗಾಗಿ ಚಿತ್ರೀಕರಣ ತಡವಾಗಿದೆ.
ಈ ಮಧ್ಯೆ ಚಿತ್ರದ ಕ್ಲೈಮಾಕ್ಸನ್ನು ಬದಲಿಸುವ ಕುರಿತು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಈ ಮೊದಲು ಕಲಾಕರ್ ಚಿತ್ರಕ್ಕೆ ಬದಲಿಸಲಾಗಿರುವ ಕ್ಲೈಮಾಕ್ಸ್ ಹಾಗೂ ಈ ಚಿತ್ರದ ಬದಲಾಗಿರುವ ಕ್ಲೈಮಾಕ್ಸ್ ಒಂದೇ ರೀತಿಯಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ 20 ದಿನ ಹೊಸದಾಗಿ ಚಿತ್ರೀಕರಣ ಮಾಡಿದರೆ ಚಿತ್ರ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಬೇಕು. ಸಧ್ಯಕ್ಕೆ ಪ್ರೇಮ್ ಲಾಡಖ್ನಲ್ಲಿದ್ದಾರೆ. ಯಾವುದಕ್ಕೂ ಅವರು ಗಾಂಧಿನಗರಕ್ಕೆ ಬಂದ ಮೇಲೆಯೇ ಉತ್ತರ.