ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಚ್ಚೋದು ಸಾಧ್ಯವೇ ಇಲ್ಲ, ಕಿಸ್ಸೂ ಮಾಡಲ್ಲ: ಅಮೂಲ್ಯ (Amulya | Cheluvina Chittara | Premism | Kannada Film)
ಸುದ್ದಿ/ಗಾಸಿಪ್
Feedback Print Bookmark and Share
 
Amulya
MOKSHA
ಕನ್ನಡದ ಪುಟಾಣಿ ಯುವ ಕುವರಿ ಸ್ವೀಟ್ ಸಿಕ್ಸ್‌ಟೀನ್ ಅಮೂಲ್ಯ ಇದೀಗ ಬೇಸಗೆ ರಜೆಯಲ್ಲದೆ, ಕಾಲೇಜಿನ ದಿನಗಳಲ್ಲೂ ಸಿನಿಮಾಗಳಲ್ಲಿ ನಟಿಸಲು ಡಿಸೈಡ್ ಮಾಡಿದ್ದಾಳೆ. ಅದಕ್ಕಾಗಿ ತನ್ನ ಪಿಯು ಕಾಲೇಜಿನ ಪ್ರಿನ್ಸಿಪಾಲರನ್ನೂ ಒಪ್ಪಿಸಿದ್ದಾಳೆ. ಸದ್ಯ ಪ್ರೇಮಿಸಂ‌ನಲ್ಲಿ ಬ್ಯುಸಿಯಾಗಿರುವ ಅಮೂಲ್ಯ ಕಿಸ್ಸಿಂಗ್ ಸೀನ್‌ನಲ್ಲೆಲ್ಲಾ ನಟಿಸೋದಿಲ್ಲವಂತೆ. ಕಿಸ್ಸು ಬೇಡವೇ ಬೇಡ. ಅಷ್ಟೇ ಅಲ್ಲ, ಬಿಚ್ಚೋದಕ್ಕೂ ನೋ.. ನೋ ಹೇಳುತ್ತಾಳೆ ಈ ಹರೆಯದ ಚೆಲುವೆ.

14ನೇ ವಯಸ್ಸಿನಲ್ಲೇ ಎಸ್.ನಾರಾಯಣ್‌ರ ಚೆಲುವಿನ ಚಿತ್ತಾರದಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಹೃದಯದಲ್ಲೇ ಚಿತ್ತಾರ ಬರೆದ ಕಿಶೋರಿ ಅಮೂಲ್ಯ. ಈಗ 10ನೇ ಕ್ಲಾಸನ್ನು ಫಸ್ಟ್ ಕ್ಲಾಸಲ್ಲಿ ಪಾಸು ಮಾಡಿದ್ದಾಗಿದೆ. ಕಾಲೇಜು ಮೆಟ್ಟಿಲು ಹತ್ತಿದ್ದೂ ಆಗಿದೆ ಅಷ್ಟರೊಳಗೆ ಮತ್ತೆ ಎಸ್‌.ನಾರಾಯಣ್‌ರ ಇನ್ನೊಂದು ಚಿತ್ರ ಚೆಲುವಿನ ಚಿಲಿಪಿಲಿಯಲ್ಲಿ ನಟಿಸಿ ಈಗ ಪ್ರೇಮಿಸಂನಲ್ಲಿ ಬ್ಯುಸಿ.

ಇಂತಿಪ್ಪ ಅಮೂಲ್ಯ ಹೇಳುದು ಹೀಗೆ. ನನ್ನ ಅಪ್ಪ ಅಮ್ಮ ಇಬ್ಬರೂ ತುಂಬ ಸ್ಟ್ರಿಕ್ಟು. ಕ್ಲಾಸಿಗೆ ಚಕ್ಕರ್ ಹೊಡೆದು ಚಿತ್ರದಲ್ಲಿ ನಟಿಸುವುದು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಈ ಹಿಂದೆ ಕೇವಲ ಬೇಸಿಗೆ ರಜೆಯಲ್ಲಿಮಾತ್ರ ಚಿತ್ರಗಳಿಗೆ ಸಹಿ ಹಾಕುತ್ತಿದ್ದೆ. ಈಗ ನಾನು ಕಾಲೇಜಿಗೆ ಕಾಲಿಟ್ಟಿದ್ದೇನೆ. ಹಿಂದೆ ಸ್ಕೂಲ್‌ನಲ್ಲಿ ಬಿಗು ನಿಯಮವಿತ್ತು. ಕಾಲೇಜಲ್ಲಿ ಹಾಗೆಲ್ಲ ಇಲ್ಲ. ನಾನು ಪ್ರಿನ್ಸಿಪಾಲರಿಗೆ ಈ ಬಗ್ಗೆ ಹೇಳಿದ್ದೇನೆ. ನನಗೆ ಸಿನಿಮಾದಲ್ಲೂ ಆಸಕ್ತಿಯಿದೆ. ಕಾಲೇಜಿಗೆ ತೊಂದರೆಯಾಗದಂತೆ ಕಾಲೇಜಿನ ದಿನಗಳಲ್ಲೇ ಜತೆಜತೆಗೆ ಸಿನಿಮಾದಲ್ಲೂ ನಟಿಸುತ್ತೇನೆ ಎಂದಿರುವುದಕ್ಕೆ ಪ್ರಿನ್ಸಿಪಾಲರು ಒಪ್ಪಿಗೆ ನೀಡಿದ್ದಾರೆ. ಅವರು ನನಗೆ ತುಂಬ ಸಪೋರ್ಟ್ ನೀಡುತ್ತಿದ್ದಾರೆ. ಪ್ರೇಮಿಸಂನ ಎರಡನೇ ಭಾಗದ ಶೂಟಿಂಗ್ ಸಂದರ್ಭ ನಾನು ಕಾಲೇಜಿಗೆ ಕೆಲವು ದಿನಗಳ ಕಾಲ ರಜೆ ಹಾಕಲೇಬೇಕಾಗುತ್ತದೆ ಎನ್ನುತ್ತಾಳೆ ಈ ಅಮೂಲ್ಯ.

Amulya
MOKSHA
ಎರಡು ಚಿತ್ರಗಳಲ್ಲಿ ನಾಯಕಿಯಾದ ಮೇಲೆ ಈಗ ಸ್ಯಾಂಡಲ್‌ವುಡ್ಡಿನಲ್ಲೇ ನೆಲೆಯೂರಿ ಬಿಟ್ಟಳಾ ಅಮೂಲ್ಯ ಎಂದರೆ ಅಮೂಲ್ಯ ಸೌಮ್ಯವಾಗಿ, ನನಗೀಗ ಹೆಚ್ಚು ಧೈರ್ಯ ಬಂದಿದೆ. ನಾನೀಗ ನಿರ್ದೇಶಕರು ಹಾಗೂ ನನ್ನ ಹೆತ್ತವರಿಂದ ನಾನು ನಟಿಸಲಿರುವ ಚಿತ್ರದ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆಯುತ್ತೇನೆ. ನನ್ನ ಅಮ್ಮ ನನ್ನ ದೊಡ್ಡ ಸಪೋರ್ಟ್. ಅಮ್ಮನೇ ನನ್ನೆಲ್ಲಾ ಕೆಲಸವನ್ನೂ ನಿಭಾಯಿಸುತ್ತಾಳೆ. ಚಿತ್ರದ ಡೇಟ್ಸ್, ಫೋನ್ ಕಾಲ್‌ಗಳು ಎಲ್ಲವನ್ನು ಅಮ್ಮನೇ ವರ್ಕ್‌ಔಟ್ ಮಾಡುತ್ತಾಳೆ. ನಾನು ಯಾವ ಡ್ರೆಸ್ಸು ಹಾಕಬೇಕೆಂದೂ ಅವಳೇ ಡಿಸೈಡ್ ಮಾಡುತ್ತಾಳೆ. ಕಾಲೇಜಿಗೆ ಹೋಗೋದಿರಲಿ, ಸಿನಿಮಾ ಶೂಟಿಂಗಿಗೆ ಹೋಗೋದಿರಲಿ... ಆಕೆಯೇ ನನ್ನ ಡ್ರೆಸ್ಸು ಸೆಲೆಕ್ಟ್ ಮಾಡ್ತಾಳೆ ಎನ್ನುತ್ತಾಳೆ ಅಮೂಲ್ಯ.

ನಟಿಸುವ ಚಿತ್ರದಲ್ಲೂ ಕೂಡಾ ಅಷ್ಟೇ. ಎಲ್ಲದಕ್ಕೂ ಅಮೂಲ್ಯಗೆ ಅಮ್ಮ ಬೇಕು. ನಾನು ನಿರ್ದೇಶಕರಿಗೆ ಚಿತ್ರದ ಕಥೆ ಕೇಳುತ್ತೇನೆ. ನಂತರ ಅಮ್ಮ, ಅಪ್ಪನಿಗೆ ಹೇಳುತ್ತೇನೆ. ಅವರಿಂದಲೂ ಒಕೆ ಬಂದರೆ, ಅವರೂ ಇಷ್ಟಪಟ್ಟರೆ ಮಾತ್ರ ಚಿತ್ರಕ್ಕೆ ಸಹಿ ಮಾಡುತ್ತೇನೆ. ಅಲ್ಲದೆ, ಚಿತ್ರದ ಶೂಟಿಂಗ್‌ಗೂ ಮೊದಲು ಆ ಚಿತ್ರದಲ್ಲಿ ಕಿಸ್ ಸೀನಿದ್ದರೆ ಒಪ್ಪುವುದಿಲ್ಲ. ಬಿಚ್ಚುವ ಪಾತ್ರವಿದ್ದರೂ ಹೂಂ ಅನ್ನುವುದಿಲ್ಲ. ಕಿಸ್ಸು, ಬಿಚ್ಚುವುದಕ್ಕೆ ನನ್ನಿಂದ ಎಂದಿಗೂ ನೋ ಉತ್ತರವೇ ಎನ್ನುತ್ತಾಳೆ ದಿಟ್ಟತನದಿಂದ.

Amulya
MOKSHA
ಹಾಗಾದರೆ, ರೊಮ್ಯಾಂಟಿಕ್ ಚಿತ್ರಗಳಲ್ಲಿ ಅಮೂಲ್ಯ ಹೇಗೆ ನಟಿಸುತ್ತಾಳೆ ಎಂದರೆ ಅಮೂಲ್ಯ, ನಾನು ಚಿತ್ರಕಥೆ ಕೇಳುತ್ತೇನೆ. ನನಗೆ ಇಷ್ಟವಿಲ್ಲದ್ದು ಏನಾದರೂ ಇದ್ದರೆ ಚಿತ್ರಕ್ಕೆ ಒಪ್ಪುವ ಮೊದಲೇ ನಿರ್ದೇಶಕರಿಗೆ ಹೇಳುತ್ತೇನೆ. ಅವರು ಸರಿಯಾಗಿ ವಿವರಿಸಿದ ಮೇಲೆ ಅಂತಹ ಸೀನ್ ಇಲ್ಲವೆಂದು ಖಚಿತವಾದರೆ ಮಾತ್ರ ಮುಂದುವರಿಯುತ್ತೇನೆ ಎನ್ನುತ್ತಾಳೆ. ಇದು ಅಮೂಲ್ಯಳ ಸಿನಿಮಾದ ಕಾಸ್ಟ್ಯೂಮ್‌ಗೂ ಅನ್ವಯಿಸುತ್ತದೆ. ಚಿತ್ರದ ಶೂಟಿಂಗ್‌ಗೆ ಹೋದ ಮೇಲೆ ಅಲ್ಲಿ ಅವರು ನೀಡಿದ ಡ್ರೆಸ್ಸು ಇಷ್ಟವಾಗದೆ ಎಸೆಯುವುದು ಮುಂತಾದ ಮುಜುಗರದ ಸನ್ನಿವೇಶದಿಂದ ಅಮೂಲ್ಯ ಯಾವಾಗಲೂ ಭಿನ್ನವೇ. ಮೊದಲೇ ಸಿನಿಮಾದ ಡ್ರೆಸ್ ತೆಗೆದುಕೊಂಡು ಬಂದು ಅವುಗಳ ಟ್ರಯಲ್ ನೋಡುತ್ತೇನೆ. ಇಲ್ಲವಾದರೆ ಶೂಟಿಂಗ್ ಸಂದರ್ಭ ಮುಜುಗರ ಅನುಭವಿಸಬೇಕಾಗುತ್ತದೆ. ನನಗೆ ಅವರು ನೀಡಿದ ಡ್ರೆಸ್ ಕಂಫರ್ಟ್ ಅನಿಸಿದರೆ ಮಾತ್ರ ಧರಿಸುತ್ತೇನೆ ಅನ್ನುತ್ತಾಳೆ ಅಮೂಲ್ಯ.

ಸದ್ಯ ಸ್ಪರ್ಧೆ ಹೆಚ್ಚಾಗಿದೆ. ಸದ್ಯ ಅಮೂಲ್ಯ ವಯಸ್ಸಿನ ಪ್ರಜ್ಞಾ ಬಂದಿದ್ದಾಳೆ. ಆಕೆಗೂ ಅಮೂಲ್ಯ ಪ್ರಾಯವೇ. ಹಾಗಾಗಿ ಸ್ಪರ್ಧೆ ಹೆಚ್ಚಾಗಿದೆ ಅಂತನಿಸುತ್ತಿಲ್ಲವೇ ಎಂದರೆ ಅಮೂಲ್ಯ, ನನ್ನನ್ನು ಸ್ಪರ್ಧೆಯಲ್ಲೆಲ್ಲ ಸೇರಿಸಬೇಡಿ. ನಾನು ಓದುವ ಜತೆಜತೆಗೇ ನಟನೆಗೂ ಇಳಿದಿದ್ದೇನೆ. ನಾನೀಗ ಸ್ಪರ್ಧೆಯ ಬಗ್ಗೆಲ್ಲ ಯೋಚಿಸುತ್ತಿಲ್ಲ ಎನ್ನುತ್ತಾಳೆ.

ಹಾಗಾದರೆ ಚಿತ್ರರಂಗದಲ್ಲಿ ಯಾರು ಗೆಳೆಯರಿದ್ದಾರೆ ಎಂದರೆ ಅಮೂಲ್ಯ ಪಕ್ಕನೆ ಉತ್ತರಿಸುವುದು ತನ್ನದೇ ವಯಸ್ಸಿನ ಪ್ರಜ್ಞಾ ಹೆಸರನ್ನು. ಪ್ರಜ್ಞಾ ನನಗೆ ಒಳ್ಳೆಯ ಗೆಳತಿ ಎನ್ನುತ್ತಾಳೆ ಅಮೂಲ್ಯ.

ಭವಿಷ್ಯದ ಪ್ಲಾನ್ ಏನು ಎಂದರೆ ಅಮೂಲ್ಯ ಹೇಳುವುದು, ಸ್ವಲ್ಪ ಕಾಲೇಜಿಗೆ ಹೋಗ್ತೀನಿ. ಸ್ವಲ್ಪ ಸಿನಿಮಾಗಳಲ್ಲೂ ನಟಿಸ್ತೀನಿ. ಉಳಿದ ಸಮಯಗಳಲ್ಲಿ ರಿಲ್ಯಾಕ್ಸ್ ಮಾಡ್ತೀನಿ ಎಂದು ಮುಗ್ಧವಾಗಿ ಹೇಳುತ್ತಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೂಲ್ಯ, ಚೆಲುವಿನ ಚಿತ್ತಾರ, ಪ್ರೇಮಿಸಂ, ಕನ್ನಡ ಸಿನಿಮಾ