ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದ ಚಂದ್ರು ಈಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಈ ಚಿತ್ರಕ್ಕೆ ಶ್ರೀನಗರ ಕಿಟ್ಟಿ ನಾಯಕ. ಮಸ್ತ ಮಜಾ ಮಾಡಿ ಚಿತ್ರ ನಿರ್ದೇಶಿಸಿದ್ದ ಅನಂತರಾಜು ಈ ಚಿತ್ರದ ನಿರ್ದೇಶಕರಾಗಿದ್ದಾರೆ.
ಇದೊಂದು ರಿಮೇಕ್ ಚಿತ್ರ. ಆದರೆ ಯಾವ ಭಾಷೆ ಎಂಬುದು ಇನ್ನು ನಿಗೂಢವಾಗಿದೆ. ಮತ್ತೊಂದು ವಿಶೇಷ ಎಂದರೆ ಗಣೇಶ್ ಮತ್ತು ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಲೇ ಕೆಲವು ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದರು. ಇದೀಗ ನೇರವಾಗಿ ನಿರ್ಮಾಪಕರ ಪಟ್ಟದಲ್ಲಿ ಕುತಿದ್ದಾರೆ.
ಹಣ ಇದ್ದವರೆಲ್ಲಾ ನಿರ್ಮಾಪಕರಾಗುವುದು ಸುಲಭದ ಮಾತಲ್ಲ. ಬಹಳ ದಿನಗಳಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆ ಚಿತ್ರ ನೀಡಬೇಕೆಂಬ ನಿಟ್ಟಿನಲ್ಲಿ ನಟಿಸುತ್ತಿದ್ದವನು ತೆರೆಯ ಹಿಂದೆ ಕೆಲಸ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎನ್ನುತ್ತಾರೆ ಚಂದ್ರು.