ಜಾನಿ ವಿಜಯ್ ಆದ ತಿಲಕ್
ಗಂಡ ಹೆಂಡತಿ ಚಿತ್ರದ ಮೂಲಕ ಕಿಸ್ಸಿಂಗ್ ಸ್ಟಾರ್ ಎಂಬ ಹಣೆಪಟ್ಟಿ ಪಡೆದ ತಿಲಕ್ ಈಗ ಜಾನಿ ವಿಜಯ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಆಕ್ಸಿಡೆಂಟ್ ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡಿದ್ದ ರಘುನಾಥ್, ಸೈಕೋ ಚಿತ್ರ ನಿರ್ಮಿಸಿ ನಷ್ಟ ಅನುಭವಿಸಿದ್ದ ಶ್ರೀನಿವಾಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಹೊಸ ಹುಡುಗ ಗುರುರಾಜ್ ನಿರ್ದೇಶನ ಮಾಡುತ್ತಿದ್ದಾರೆ.ಜಾನಿ ವಿಜಯ್ ಟೈಟಲ್ ಒಂದು ರೀತಿ ಇದ್ದರೆ ಚಿತ್ರದ ಕತೆಯೇ ಬೇರೆ. ಇಬ್ಬರು ಗೆಳೆಯರ ಕತೆಯನ್ನು ಇದು ಒಳಗೊಂಡಿದೆ. ಗಂಡ ಹೆಂಡತಿ ಚಿತ್ರದಿಂದ ವಿಲನ್ ಪಾತ್ರಗಳಿಗೆ ಸೀಮಿತವಾಗಿದ್ದ ತಿಲಕ್ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದಕೊಂಡಂತೆ ನಡೆದರೆ ಚಿತ್ರವೂ ಅಷಾಢ ಮುಗಿದ ಬಳಿಕ ಸೆಟ್ಟೇರಲಿದೆ.