ಕನ್ನಡದಲ್ಲಿ ಗ್ಲಾಮರ್ ನಟಿಯರಿಲ್ಲ ಎನ್ನುವ ಹೊತ್ತಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಿಧಿ ಸುಬ್ಬಯ್ಯ. ಮಾಡಲಿಂಗ್ ಹಿನ್ನೆಲೆಯ ಈ ನಟಿ ಬಹುಬೇಗ ಸ್ಯಾಂಡಲ್ವುಡ್ಡಿನ ಗ್ಲ್ಯಾಮರ್ ನಿಧಿಯಾಗಿ ಗುರುತಿಸಿಕೊಂಡವರು.
ಇಂತಿಪ್ಪ ನಿಧಿಯ ಪೋಷಕರಿಗೆ ಈಗೊಂದು ತಲೆನೋವು ಆರಂಭವಾಗಿದೆ. ಕಂಡದ್ದೆಲ್ಲಾ ಬೇಕು ಎನ್ನುವ ನಿಧಿಯನ್ನು ಹೇಗಪ್ಪಾ ಸಂಭಾಳಿಸೋದು ಅನ್ನೋದೇ ಈ ಹೊಸ ತಲೆನೋವು.
ಇತ್ತೀಚೆಗೆ ಮಾತಿಗೆ ಸಿಕ್ಕಾಗ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. ಇವರಿಗೆ ಸಿಕ್ಕಾಪಟ್ಟೆ ಶಾಪಿಂಗ್ ಕ್ರೇಜ್ ಇದೆಯಂತೆ. ಕಂಡದ್ದೆಲ್ಲಾ ಬೇಕೆನ್ನುವ ಜಾಯಮಾನ. ಇದರಿಂದ ಯಾವಾಗ ಮುಕ್ತಿ ಎಂಬುದೇ ಇವರ ಮನೆಯವರಿಗೆ ಚಿಂತೆಯಂತೆ. ಒಂದು ಅಂಗಡಿ ತೆರೆಯಬಹುದಾದಷ್ಟು ಬಟ್ಟೆ, ಷೂ, ಬ್ಯಾಗ್ಸ್ ಮನೆಯಲ್ಲಿದೆಯಂತೆ. ಅಂದರೆ ಎಷ್ಟಿರಬಹುದು ಎಂದು ಊಹಿಸಿಕೊಳ್ಳಿ.
ಇತ್ತೀಚೆಗೆ ಬಿಡುಗಡೆಯಾದ ಚಮ್ಕಾಯ್ಸಿ ಚಿಂದಿ ಉಡಾಯಿಸಿ ಚಿತ್ರದಲ್ಲಿ ನಿಧಿ ನಟನೆ, ಗ್ಲಾಮರ್ ಎರಡೂ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ನಟಿಯಾಗಿ ಅಲ್ಲ. ಗ್ಲಾಮರ್ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಾಗಿದೆ ಎಂದು ಆರೋಪಿಸುವ ಮೂಲಕ ಈ ನಿಧಿ ವಿವಾದವೆಬ್ಬಿಸಿದ್ದರು.