ಇದು ಜೋಶ್ ಸಂವಾದ
ಜೋಶ್ ತಂಡ ಇದೀಗ ಫುಲ್ ಜೋಶ್‌ನಲ್ಲಿದೆ. ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಸಂವಾದ ಸಂಸ್ಕ್ಕತಿಯನ್ನು ಇದೀಗ ಜೋಶ್ ಚಿತ್ರದ ನಿರ್ದೇಶಕ ಶಿವಮಣಿ ಮಾಡಿ ಯಶಸ್ವಿ ಎನಿಸಿದ್ದಾರೆ. ಜೋಶ್ ಚಿತ್ರ ನೂರು ದಿನ ಓಡಿದ ಸಂತೋಷ ಹಂಚಿಕೊಳ್ಳಲು ಅವರು ಓತಣಕೂಟ ಏರ್ಪಡಿಸಿದ್ದರು.ನಿರ್ದೇಶಕರು ಜೋಶ್ ಚಿತ್ರದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಹಲವರೊಂದಿಗೆ ಚರ್ಚೆ ನಡೆಸಿದ್ದಾರಂತೆ. ಕೆಲವರು ಭಾವುಕರಾಗಿ ಅತ್ತಿದ್ದಾರೆ. ತಮ್ಮ ಮನೆಯಲ್ಲಿ ತಮ್ಮ ಮಗನಿಗೆ ಇದು ಕಣ್ಣು ತೆರಸಿತು ಅಂತ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನೂ ಹೇಳಿದವರಿದ್ದಾರೆ. ಹಲವು ಪ್ರಶ್ನೆಗಳಿಗೆ ಚಿತ್ರತಂಡ ಉತ್ತರ ನೀಡಲು ಸಾಧ್ಯವಾಗದಾಗ ಪ್ರೇಕ್ಷಕರೇ ನೀಡಿದ್ದಾರೆ. ಅಷ್ಟೇ ಅಲ್ಲ, ಜೋಶ್ ಚಿತ್ರ ಸೋತರೆ ಚಿತ್ರ ನಿರ್ಮಾಣವೇ ಮಾಡಲ್ಲ ಎಂದ ನಿರ್ಮಾಪಕ ಬಾಬು ಈಗ ಹಾಕಿದ ಹಣ ವಾಪಸ್ ಬಂದಿರುವುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಿಧಾನವಾಗಿ ಇನ್ನೊಂದು ಚಿತ್ರ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಮ್ಮಿಕೊಂಡಿದ್ದಾರೆ ಬಾಬು.