ಗಣೇಶ್ ಈ ಬಾರಿ ಉಲ್ಲಾಸದಿಂದ ಹೆಜ್ಜೆ ಹಾಕಿದ್ದಾರೆ. ಹೌದು ತಮ್ಮ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರಕ್ಕೆ ಮುತ್ತಿನ ನಗರ ಹೈದರಾಬಾದ್ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ.
ಜಯಂತ ಕಾಯ್ಕಿಣಿ ಬರೆದಿರುವ ಚಲಿಸುವ ಚೆಲುವೆ ನಾ ಹೇಳಲೇ ಬೇಕೆಂದ... ಎಂಬ ಹಾಡಿಗೆ ಪ್ರದೀಪ್ ಅಂಥೋನಿ ಮತ್ತು ಮನೋಜ್ ನೃತ್ಯ ಸಂಯೋಜಿಸಿದ್ದಾರೆ. ಚಿತ್ರವನ್ನು ದೇವರಾಜ್ ಪಾಲನ್ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಖ್ಯಾತ ನಾಮರೊಂದಿಗೆ ಸಹಾಯಕರಾಗಿದ್ದ ಇವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಇದು ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರದ ರಿಮೇಕ್. ಅಲ್ಲಿ ಯಶೋ ಸಾಗರ್ ಹಾಗೂ ಸ್ನೇಹಾ ಉಲ್ಲಾಳ್ ನಟಿಸಿದ್ದರು. ಇಲ್ಲಿ ಗಣೇಶ್ಗೆ ಯಾಮಿ ಗೌತಮಿ ಜೊತೆಯಾಗಿದ್ದಾರೆ. ಹದಿಹರೆಯರ ಹುಡುಗರ ಹುಡುಗಾಟದಲ್ಲಿ ಹುಟ್ಟುವ ಪ್ರೀತಿ, ಅದರ ಪೋಷಣೆ ಹೀಗೆ ಹಲವು ಪ್ರೇಮದ ಸುತ್ತಲೇ ಗಿರಕಿ ಹೊಡೆಯುವ ಚಿತ್ರ ಇದಾಗಿದೆ. (ಉಲ್ಲಾಸ ಉತ್ಸಾಹ ಸಿನಿಮಾದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)