ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎರಡನೇ ಮದುವೆಯತ್ತ ಸುಹಾಸಿನಿ ಹೆಜ್ಜೆ! (Suhasini | Dinesh Babu | Anathnag | Eradane Maduve)
ಸುದ್ದಿ/ಗಾಸಿಪ್
Feedback Print Bookmark and Share
 
Suhasini
MOKSHA
ಹೌದು. ಸುಹಾಸಿನಿ ಎರಡನೇ ಮದುವೆಯತ್ತ ಹೆಜ್ಜೆಯಿಟ್ಟಿದ್ದಾರೆ. ತನ್ನದೇ ವಿಶೇಷ ಚೆಹರೆಯ ಮನೆಮಗಳಂತೆ ಸೆಳೆವ ಕಂಗಳ ಸುಹಾಸಿನಿಗೆ ಎರಡನೇ ಮದುವೆ ಹುಚ್ಚು ಯಾಕಪ್ಪಾ ಅಂತೆಲ್ಲಾ ತಲೆಕೆಡಿಸಬೇಡಿ. ವಿಷಯ ತುಂಬಾ ಸಿಂಪಲ್. ಎರಡನೇ ಮದುವೆಯ ಜೋಡಿ ಅನಂತನಾಗ್ ಹಾಗೂ ಸುಹಾಸಿನಿ!

ಈಗ ನಿಮಗೆ ಸ್ವಲ್ಪ ವಿಷಯ ತಲೆಗೆ ಹೊಕ್ಕಿರಬಹುದು. ಹೌದು. ನಿರ್ದೇಶಕ ದಿನೇಶ್ ಬಾಬು ಎರಡನೇ ಮದುವೆ ಎಂಬ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಗಾಂಧಿನಗರಕ್ಕೆ ಬಂದಿರುವ ದಿನೇಶ್ ಬಾಬು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮೃತವರ್ಷಿಣಿ, ಮಿಸ್ಟರ್ ಗರಗಸದಂತ ಹಿಟ್ ಚಿತ್ರ ನೀಡಿರುವ ಬಾಬು ಇಲ್ಲೊಂದು ಪಕ್ಕಾ ಕಾಮಿಡಿ ಚಿತ್ರ ನೀಡುತ್ತಿದ್ದಾರೆ. ಚಿತ್ರವನ್ನು ರಾಜೀವ್ ನಿರ್ಮಿಸುತ್ತಿದ್ದಾರೆ. ಅನಂತನಾಗ್ ಮತ್ತು ಸುಹಾಸಿನಿ ಜೋಡಿ ಬಹಳ ವರ್ಷದ ಬಳಿಕ ಒಂದಾಗಿದ್ದಾರೆ.

ಅಂದ ಹಾಗೆ ಯಾರಿಗೆ ಎರಡನೇ ಮದುವೆ ಎಂದು ಕೇಳಿದರೆ ಅದು ಕ್ಲೈಮಾಕ್ಸ್‌ನಲ್ಲಿ ಗೊತ್ತಾಗುತ್ತದೆ ಎನ್ನುತ್ತಾರೆ ಸುಹಾಸಿನಿ. ನಾಯಕ/ನಾಯಕಿ ಇಬ್ಬರಿಗೂ ಎರಡನೇ ಮದುವೆ ಆಗಿರುತ್ತದೆ. ಅದು ಏಕೆ ಎಂಬ ಉತ್ತರ ಚಿತ್ರದಲ್ಲಿದೆ ಎಂದು ಸ್ವಲ್ಪವೇ ಸ್ವಲ್ಪ ಕಥೆಯ ಒಳಗುಟ್ಟನ್ನು ಬಿಚ್ಚಿದರು ಸುಹಾಸಿನಿ.. ಚಿತ್ರದಲ್ಲಿ ತಾರಾ, ನೆನಪಿರಲಿ ಪ್ರೇಮ್, ಶರಣ್, ರಂಗಯಾಣ ರಘು ಮೊದಲಾದವರಿದ್ದಾರೆ. ಸುಹಾಸಿನಿಯ ಎರಡನೇ ಮದುವೆಗೆ ಕಾಯೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುಹಾಸಿನಿ, ಎರಡನೇ ಮದುವೆ, ದಿನೇಶ್ ಬಾಬು, ಅನಂತನಾಗ್