ವಿಜಯ್, ಶುಭಾ ಪೂಂಜಾ ಜೋಡಿ ಗಾಂಧಿನಗರದಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಈ ಖ್ಯಾತ ಜೋಡಿಯ ತಾಕತ್ ಚಿತ್ರ 15 ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದೆ.
ಈ ಗೆಲುವಿನಲ್ಲಿಯೇ ನಿರ್ದೇಶಕ ಎಂ.ಎಸ್. ರಮೇಶ್ ಮತ್ತೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ತಾಕತ್ ನಿರ್ಮಿಸಿದ 24 ಫ್ರೇಮ್ಸ್‌ನ ಪ್ರಮೋದ್ ಮತ್ತು ರಾಜಶೇಖರ್ ನಿರ್ಮಿಸಲಿರುವ ಕನ್ನಡಿ ಚಿತ್ರದ ನಿರ್ದೇಶನವನ್ನು ವಹಿಸಿಕೊಂಡಿದ್ದಾರೆ. ತಲೆ ಬಾಚ್ಕೊಳ್ಳೋ ಪೌಡ್ರ್ ಹಾಕ್ಕೊಳ್ಳೋ ಎನ್ನುವುದು ಇದರ ಟ್ಯಾಗ್‌ಲೈನ್. ಇದು ಜಂಗ್ಲಿ ಚಿತ್ರದ ಹಾಡು. ಅಲ್ಲಿ ದುನಿಯಾ ಸತ್ಯಣ್ಣ ಮತ್ತು ಜಂಗ್ಲಿಯ ಗುಡ್ಡೆ ಅಂದರೆ ರಂಗಾಯಣ ರಘು. ಇವರೇ ಈ ಹೊಸ ಚಿತ್ರದ ಪ್ರಮುಖ ಪಾತ್ರ ಧಾರಿ. ಅಂದ ಮೇಲೆ ನಗುವಿಗೆ ಖಂಡಿತಾ ಬರವಿರದು.
ಅಂದ ಹಾಗೆ ಇದು ಪಕ್ಕಾ ಕಾಮಿಡಿ ಚಿತ್ರವೇ ಎಂಬುದು ಮಾತ್ರ ಪಕ್ಕಾ ಆಗಿಲ್ಲ. ಇದು ಫೈನಲ್ ಆಗಿಲ್ಲ ಗುರುಗಳೇ ಎಂದು ರಾಗ ಎಳೆಯುತ್ತಾರೆ ರಂಗಾಯಣ ರಘು. ಇನ್ನೊಂದು ವಿಷಯ, ರಂಗಾಯಣ ರಘು ಅವರು ಮುಖ್ಯ ಪಾತ್ರದಲ್ಲಿರುವ ಮಿಸ್ಟರ್ ಪೇಂಟರ್ ಈ ವಾರ ತೆರೆ ಕಾಣುತ್ತಿದೆ.