ಗ್ಲ್ಯಾಮರ್ ಬೇಡಪ್ಪಾ..! ಹೌದು. ಹೀಗೆಂದವರು ಬೇರಾರೂ ಅಲ್ಲ. ಗ್ಲಾಮರ್ ತಾರೆ ನಮಿತಾ. ಇದೀಗ ನಮಿತಾಗೆ ಜ್ಞಾನೋದಯವಾಗಿದೆಯೋ ಗೊತ್ತಿಲ್ಲ. ಇನ್ನು ಮುಂದೆ ಅಭಿನಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಗ್ಲ್ಯಾಮರ್ ಬೇಡ ಎನ್ನುತ್ತಾರೆ. ಚಿತ್ರದಲ್ಲಿ ನಟನೆಯ ಮೂಲಕ ಕೇಂದ್ರ ಬಿಂದು ತಾನಾಗಿರಬೇಕೆಂಬುದು ಅವರ ಹಂಬಲ.
ಗ್ಲ್ಯಾಮರಸ್ ಆಗಿ ಇದ್ದು ಇದ್ದು ಬೋರಾಗಿದೆ. ಹಾಗಾಗಿ ಇನ್ನು ಮುಂದೆ ಗ್ಲ್ಯಾಮರ್ ಮತ್ತು ನಟನೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಅವರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ನಮಿತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ನಟಿಸಲಿದ್ದಾರೆ.
ಚಿತ್ರವನ್ನು ದಿನೇಶ್ ಗಾಂಧಿ ನಿರ್ಮಿಸಲಿದ್ದಾರೆ. ಈಗಾಗಲೇ ಚಿತ್ರದ ಕತೆಯನ್ನು ಕೇಳಿರುವ ನಮಿತಾ, ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರಂತೆ. ರವಿಚಂದ್ರನ್ ಜೊತೆ ನಟಿಸುವುದಕ್ಕೆ ಖುಷಿಯಿದೆ ಎನ್ನುವ ನನಿತಾ, ಅವರು ಪರಿಪೂರ್ಣತೆ ಬಯಸುವ ಕಲಾವಿದ. ಅದಕ್ಕೆ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎನ್ನುತ್ತಾರೆ ಅವರು.
ಅಂದ ಹಾಗೆ, ಈ ಸೆಕ್ಸಿ ನಟಿ ಈ ಹೊಸ ಚಿತ್ರಕ್ಕಾಗಿ ಬರೊಬ್ಬರಿ 9 ಕೆ.ಜಿ. ಕಮ್ಮಿಯಾಗಿದ್ದಾರಂತೆ. ಆದರೆ ಬಿಚ್ಚೊಲೆ ಗೌರಮ್ಮನಾಗಲ್ಲ ಅಂತಾರೆ. ಎಲ್ಲದಕ್ಕೂ ಕಾಯಬೇಕು.