ಗೌತಮ್ ಚಿತ್ರದ ನಿರ್ಮಾಪಕ ಮಾಲಿನಿ ಸುಬ್ರಹ್ಮಣ್ಯಂ ಇದೀಗ ಮತ್ತೊಂದು ಚಿತ್ರ ನಿರ್ಮಾಣದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಗೌತಮ್ ಚಿತ್ರಕ್ಕೆ ಮಾಧ್ಯಮ ಪ್ರಶಂಸೆ ಕೇಳಿ ಬಂದಿತ್ತಾದರೂ, ಪ್ರೇಕ್ಷಕರು ಸ್ವೀಕರಿಸಿರಲಿಲ್ಲ. ಇನ್ನು ಮಾಲಿನಿ ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆ ಎಂದಾಗಲೇ ಇನ್ನೊಂದು ಚಿತ್ರ ಹಿಡಿದುಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ. ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ಅದಕ್ಕಾಗಿ ಮಳೆಯಾಳಂನ ಕಾಮಿಡಿ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ.
ಚಿತ್ರಕ್ಕೆ ಇನ್ನು ಹೆಸರು ಅಂತಿಮಗೊಂಡಿಲ್ಲ. ಅಲ್ಲದೆ, ನಾಯಕ-ನಾಯಕಿಯರ ಆಯ್ಕೆಯೂ ಆಗಬೇಕಿದೆ. ಚಿತ್ರವನ್ನು ಗೌತಮ್ ಚಿತ್ರದ ನಿರ್ದೇಶಕರಾದ ರಾಜೀವ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದಕೊಂಡಂತೆ ಆದರೆ ಮುಂದಿನ ಸೆಪ್ಟೆಂಬರ್ ವೇಳೆ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಗಳಿವೆ.