ಅಮ್ಮನ ಪಾತ್ರಗಳಿಗೆ ಫೇವರಿಟ್ ಆಗಿ ಕಾಣಿಸಿಕೊಂಡಿದ್ದ ಪದ್ಮಜಾ ರಾವ್ ಇದೀಗ ನಿರ್ದೇಶನದತ್ತ ಹೆಜ್ಜೆ ಇರಿಸಿದ್ದಾರೆ. ಜಾನೆ ತೂ ಯಾ ಜಾನೇ ನಾ ಹಾಗೂ ಜಬ್ ವಿ ಮೆಟ್ ತರಹದ ಒಂದು ಚಿತ್ರವನ್ನು ಕನ್ನಡಕ್ಕೆ ತರಲು ನಿರ್ಧರಿಸಿದ್ದಾರೆ.
ಅವರೇ ಹೇಳುವಂತೆ ಚಿತ್ರ ಮಾಡುವುದು ಸ್ವಲ್ಪ ಕಷ್ಟವೇ ಆದರೆ ಚಿತ್ರರಂಗದ ಹಲವು ಗಣ್ಯರು ಇವರೊಂದಿಗೆ ಕೈಜೋಡಿಸಿದ್ದಾರೆ. ಈಗಾಗಲೇ ದಿಗಂತ್, ಯಶ್, ಅಂದ್ರಿತಾ ರೇ ಮೊದಲಾದವರಿಗೆ ಕತೆ ಹೇಳಿದ್ದಾರೆ. ಯಾರೂ ಒಪ್ಪುತ್ತಾರೋ ಗೊತ್ತಿಲ್ಲ. ಆದರೆ ಅನಂತನಾಗ್, ರಂಗಾಯಣ ರಘು, ಲಕ್ಷ್ಮೀ ಮುಂತಾದವರು ಪದ್ಮಜಾ ಬೆನ್ನಿಗೆ ಇರುವುದಾಗಿ ಹೇಳಿದ್ದಾರಂತೆ.
ಅಷ್ಟೇ ಅಲ್ಲ, ಪದ್ಮಜಾ ಬರೆದಿರುವ ಕತೆಯನ್ನು ಯೋಗರಾಜ್ ಭಟ್ ಇನ್ನಷ್ಟು ಚುರುಕಾಗಿಸಿದ್ದಾರೆ. ಅವರೇ ಜಯಂತ್ ಕಾಯ್ಕಿಣಿ ಜತೆ ಸೇರಿ ಹಾಡು ಬರೆಯಲಿದ್ದಾರಂತೆ. ಚಿತ್ರವನ್ನು ಸೆಪ್ಟೆಂಬರ್ನಲ್ಲಿ ಪ್ರಾರಂಭಿಸಲು ಯೋಜಿಸಿದ್ದಾರೆ ಪದ್ಮಜಾ. ಪದ್ಮಜಾಗೆ ಆಲ್ ದಿ ಬೆಸ್ಟ್.