ತಾಕತ್ ಚಿತ್ರದಲ್ಲಿ ಸಿಕ್ಸ್ ಪ್ಯಾಕ್‌ನೊಂದಿಗೆ ತೆರೆಯ ಮೇಲೆ ಬಂದಿದ್ದ ವಿಜಯ್ ಇದೀಗ ದೇವರಿಗಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಥಾತ್, ದೇವರು ಚಿತ್ರಕ್ಕಾಗಿ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು. ಈ ಚಿತ್ರಕ್ಕಾಗಿ ವಿಜಯ್ ಗುಂಡು ಹೊಡೆಸಲಿದ್ದಾರೆ. ನುಣ್ಣಗೆ, ತಮ್ಮ ತಲೆಯನ್ನು ಮಿರಿಮಿರಿ ಮಿಂಚಿಸಲಿದ್ದಾರೆ.
ಆದರೆ ಇದು ಅವರ ಮುಂದಿನ ಚಿತ್ರಕ್ಕೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದರೆ, ದೇವರು ಮುಗಿಸಿ ಒಂದೆರಡು ತಿಂಗಳು ಕಳೆಯುತ್ತಿದ್ದಂತೆ, ತಲೆ ಮೇಲೆ ಸಣ್ಣಗೆ ಕೂದಲು ಬೆಳೆದಿರುತ್ತದೆ. ಅದು ಕರಿ ಚಿರತೆಗೆ ಹೇರ್‌ಸ್ಟೈಲ್ ಆಗಲಿದೆ ಎನ್ನುತ್ತಾರೆ ವಿಜಯ್. ಹೇಗಿದೆ ಒಂದೇ ಏಟಿಗೆ ಎರಡು ಹಕ್ಕಿ?