ಬಟ್ಟಲ ಕಂಗಳ ಬೆಡಗಿ ಆಂದ್ರಿತಾ ರೇ ಬರೋಬ್ಬರಿ ಸಂಭ್ರಮದಲ್ಲಿದ್ದಾರೆ. ಅವರ ಅಭಿನಯದ ಜಂಗ್ಲಿಗೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿರುವುದು ಹಾಗೂ ಯೋಗರಾಜ ಭಟ್ಟರ ಮನಸಾರೆ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರ ಸಂತಸ ಮುಗಿಲು ಮುಟ್ಟಿದೆ.
ಆದರೆ ಮನಸಾರೆ ಚಿತ್ರದಲ್ಲಿ ಆಂದ್ರಿತಾ ಕಾಣಿಸಿಕೊಳ್ಳುತ್ತಿರುವುದು ಒಂದೇ ಒಂದು ಕಾಸ್ಟ್ಯೂಮ್ನಲ್ಲಂತೆ. ಆದರೆ ಹಾಡುಗಳಲ್ಲಿ ವಿಧವಿಧದ ಕಾಸ್ಟ್ಯೂಮ್ಗಳಲ್ಲಿ ಕಲರ್ಫುಲ್ ಆಗಿ ಕಾಣಿಸಿಕೊಂಡಿದ್ದಾರಂತೆ. ಇದು ಬಿಟ್ಟರೆ ಎಲ್ಲಿಯೂ ಮೇಕಪ್ ಇಲ್ಲ. ಅನ್ನುವುದಕ್ಕಿಂತ ಮೇಕಪ್ ಹಾಕಿಸಿಲ್ಲ ಎಂದರೆ ಸೂಕ್ತ. ಮುಖ್ಯವಾಗಿ ಭಟ್ಟರಿಗೆ ಮೇಕಪ್ ಎಂದರೆ ಇಷ್ಟವಿಲ್ಲ. ಇವರಿಗೂ ಮೇಕಪ್ ಅಂದರೆ ಅಲರ್ಜಿಯಂತೆ.
IFM
ಜಂಗ್ಲಿ ಚಿತ್ರದಲ್ಲಿ ಗ್ಲಾಮರ್ ಪಾತ್ರ ಬಿಟ್ಟರೆ ಮನಸಾರೆ ಬಳಿಕ ಅಭಿನಯಿಸಲಿರುವ ಧೂಳ್ ಚಿತ್ರದಲ್ಲಿ ಸಿಂಪಲ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆಂದ್ರಿತಾ. ಇವರು ಅಭಿನಯಿಸಿರುವ ಏಳು ಚಿತ್ರಗಳಲ್ಲಿ ಬಿಡುಗಡೆಯಾಗಿದ್ದು ಎರಡು ಮಾತ್ರ. ಇನ್ನು ನಾಲ್ಕು ಚಿತ್ರಗಳು ಸಿದ್ಧವಾಗಿವೆ. ನನ್ನವನು, ಜನುಮಜನುಮದಲ್ಲೂ, ವಾಯುಪುತ್ರ, ಮನಸಿನ ಮಾತು ಇನ್ನಷ್ಟೇ ತೆರೆಕಾಣಬೇಕು.
ಅಂದ ಹಾಗೆ ಕೊನೆ ಮಾತು. ಇವರು ಹಲವು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದರೂ ರಿಮೇಕ್ ಚಿತ್ರ ಇವರಿಗೆ ಇಷ್ಟವಿಲ್ಲ. ಅದರಲ್ಲಿ ಏನೂ ಫ್ರೆಶ್ ಇಲ್ಲ ಎಂಬುದು ಅವರ ಅನಿಸಿಕೆ. ಅದಕ್ಕಾಗಿ ರಿಮೇಕ್ ಚಿತ್ರಗಳನ್ನು ನೋಡುವುದೇ ಕಮ್ಮಿಯಂತೆ.