ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕವಿಗೆ ಪ್ರಶಸ್ತಿಯ ಗರಿ (Kaviraj | R N Jayagopal | Love Guru | Josh)
ಸುದ್ದಿ/ಗಾಸಿಪ್
Feedback Print Bookmark and Share
 
Kaviraj
MOKSHA
ಗೀತೆ ರಚನೆಕಾರ ಕವಿರಾಜ್ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಹಿರಿ ಚಿತ್ರ ಸಾಹಿತಿ ಆರ್.ಎನ್. ಜಯಗೋಪಾಲ್ ಕುಟುಂಬ ಆರ್.ಎನ್.ಜೆ ಪ್ರೊಡಕ್ಷನ್ಸ್ ವತಿಯಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇವರ ಗೀತೆ ರಚನೆಗೆ ಪ್ರೇಕ್ಷಕ ಮನ ಸೋತಿದ್ದಾನೆ ಎಂದರೆ ತಪ್ಪಿಲ್ಲ. ಪ್ರಸ್ತುತ ಎಫ್ಎಂ ಮತ್ತು ಕಿರುತೆರೆಯಲ್ಲಿ ಕೇಳಿಸುತ್ತಿರುವ ಹಿಟ್ ಹಾಡುಗಳಲ್ಲಿ ಹಲವು ಕವಿರಾಜ್ ಅವರದ್ದೇ. ಈಗಷ್ಟೇ ತೆರೆಕಂಡ ಲವ್‌ಗುರು ಚಿತ್ರದ ತಂಗಾಳಿ... ಗೀತೆಯೂ ಕವಿರಾಜ್ ವಿರಚಿತ. ಜೋಶ್ ಶತದಿನೋತ್ಸವದಲ್ಲಿ ಇತ್ತೀಚೆಗೆ ಭಾಗವಹಿಸಿ ಬಂದಿದ್ದರು. ಅವರೀಗ ಮಳೆಯಲಿ ಜೊತೆಯಲಿ ಸಿನಿಮಾಗೆ ಬರೆಯುತ್ತಿದ್ದಾರೆ.

ಕವಿತೆ ಬರೆಯುವುದರ ಜೊತೆ ಸಿನಿಮಾ ನಿರ್ದೇಶನದ ಕನಸು ಜಾಗೃತವಾಗಿದೆ. ಇದು ಅವರ ಬಹುದಿನದ ಕನಸಾಗಿತ್ತು. ಆದರೆ ಕವಿತೆ ನಡುವೆ ಬಿಡುವು ದೊರೆಯದೆ ಹಾಗೆ ಉಳಿದಿದೆ. ಈಗ ಎರಡು ಚಿತ್ರಕತೆಯೂ ಸಿದ್ಧವಾಗಿದೆ. ಎರಡರಲ್ಲಿ ಯಾವುದು ಎಂಬುದು ಇನ್ನು ಅಂತಿಮಗೊಂಡಿಲ್ಲ. ಅವೆಲ್ಲಾ ಹಾಗಿರಲಿ. ಅಂದಹಾಗೆ ಕವಿರಾಜ್, ನಿರ್ದೇಶನಕ್ಕಾಗಿ ಮದುವೆಯನ್ನು ಮುಂದೂಡಿದ್ದಾರಂತೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕವಿರಾಜ್, ಚಿತ್ರ ಸಂಗೀತ, ಆರ್ ಎನ್ ಜಯಗೋಪಾಲ್, ಲವ್ ಗುರು