ದೇವರು ಕೊಟ್ಟ ತಂಗಿ ಮೀರಾ
ಲಾಂಗ್, ಮಚ್ಚು ಹಿಡಿದ ಕೈಯಲ್ಲಿ ಇದೀಗ ಹಸುವಿನ ಕರುವನ್ನು ಹಿಡಿದಿದ್ದರು. ಇನ್ನೊಂದು ಕೈಯಲ್ಲಿ ಲುಂಗಿ ಹಿಡಿದಿದ್ದರು. ನೋಡಿದರೆ ಥೇಟ್ ರೈತನ ಮಗ ಅನ್ನುವುದರಲ್ಲಿ ಸಂಶಯವಿಲ್ಲ. ಇದು ಶಿವರಾಜ್ ಕುಮಾರ್ ಹೊಸ ಸ್ಟೈಲ್.ಹೌದು. ತಮ್ಮ ಮುಂದಿನ ಚಿತ್ರ ದೇವರು ಕೊಟ್ಟ ತಂಗಿಗಾಗಿ ಈ ವೇಷ. ಚಿತ್ರದ ವಿಶೇಷತೆ ಮನಬಿಚ್ಚಿ ಮಾತನಾಡಿದ ನಿರ್ದೇಶಕ ಸಾಯಿಪ್ರಕಾಶ್, ಚಿತ್ರದ ಕ್ಲೈಮಾಕ್ಸ್ನಲ್ಲಿ ಪ್ರವಾಹವೇ ಪ್ರಮುಖ ಪಾತ್ರ. ಅದನ್ನು ಶಿಂಷಾದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ. ನೈಜವಾಗಿ ಚಿತ್ರೀಕರಿಸುವ ಪ್ಲಾನ್ ಇದೆ ಎಂದು ವಿವರಿಸಿದರು. ಚಿತ್ರದಲ್ಲಿ ತಂಗಿ ಮಾತ್ರದಲ್ಲಿ ಮೀರಾ ಜಾಸ್ಮಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಸಲು ಸದಾ ಸಿದ್ಧ ಎನ್ನುವುದು ಮೀರಾ ಮಾತು. ಚಿತ್ರದಲ್ಲಿ ಶಿವರಾಜ್ ಕುಮಾರ್ಗೆ ನಾಯಕಿಯಾಗಿ ಪರಭಾಷಾ ತಾರೆ ಮೋನಿಕಾ ನಟಿಸುತ್ತಿದ್ದಾರೆ. ತಾಯಿಯ ಸ್ಥಾನದಲ್ಲಿ ಹೇಮಾಚೌಧರಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಯಜಮಾನ ಪಾತ್ರದಲ್ಲಿ ಸ್ವತಃ ಸಾಯಿಪ್ರಕಾಶ್ ನಟಿಸಲಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಅಗಸ್ಟ್ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.