ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರಗಳೇ ಆದ್ಯತೆ: ರಾಧಿಕಾ ಪಂಡಿತ್ (Radhika Pandith | Love Guru | Moggina Manasu | Olave Jeevana Lekkachara)
ಸುದ್ದಿ/ಗಾಸಿಪ್
Feedback Print Bookmark and Share
 
Radhika Pandith
MOKSHA
ಭಾವ ತುಂಬಿದ ಕಂಗಳ ಹುಡುಗಿ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸುತ್ತಿದ್ದಾರೆ. ತಮಿಳು, ತೆಲುಗು ಚಿತ್ರಗಳಿಂದ ಕರೆ ಬಂದರೂ ಕನ್ನಡಕ್ಕೆ ಪ್ರಮುಖ ಆದ್ಯತೆ ನೀಡುತ್ತಿದ್ದಾರೆ.

18ನೇ ಕ್ರಾಸ್ ಚಿತ್ರಕ್ಕೆ ಸಹಿ ಹಾಕಿದರೂ, ಬಿಡುಗಡೆಯಾದ ಮೊದಲ ಚಿತ್ರ ಮೊಗ್ಗಿನ ಮನಸು. ಮೊದಲ ಚಿತ್ರದಲ್ಲೇ ಭೇಷ್ ಎನಿಸಿಕೊಂಡ ರಾಧಿಕಾ ಮತ್ತೆ ಹಿಂತಿರುಗಿ ನೋಡಿಲ್ಲ. ಒಲವೇ ಜೀವನ ಲೆಕ್ಕಚಾರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಇದೀಗ ಸೂಪರ್‌ಮ್ಯಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೆಯ ಲವ್‌ಗುರು ಚಿತ್ರ ಬಿಡುಗಡೆಯಾಗಿದೆ.

ಅಂದಹಾಗೆ ಇವರಿಗೆ ಗ್ಲಾಮರ್‌ಗಾಗಿ ನಾಯಕಿಯನ್ನು ಬಳಸುವುದು ಇಷ್ಟವಿಲ್ಲವಂತೆ. ನಾಯಕಿಗೂ ಪ್ರಾಮುಖ್ಯತೆ ಇರುವ ಗಟ್ಟಿ ಪಾತ್ರಗಳು ಇಷ್ಟ ಎನ್ನುವುದು ರಾಧಿಕಾ ಅನಿಸಿಕೆ. ಏನೇ ಮಾಡಿದರೂ ಚೆನ್ನಾಗಿ ಮಾಡಬೇಕು. ಅದರಿಂದಲೇ ಸಮಾಧಾನ ಎನ್ನುವುದು ಅವರ ಪಾಲಿಸಿ. ಏನೇ ಆಗಲಿ ತಮಿಳು ತೆಲುಗು ಚಿತ್ರದಿಂದ ಸಾಕಷ್ಟು ಆಫರ್ ಬಂದಿದ್ದರೂ, ಅವುಗಳನ್ನೆಲ್ಲಾ ಬದಿಗೊತ್ತಿ ಕನ್ನಡ ಚಿತ್ರಗಳಿಗೆ ಪ್ರಾಮುಖ್ಯತೆ ನೀಡಿರುವ ರಾಧಿಕಾಗೆ ಭೇಷ್ ಎನ್ನಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಧಿಕಾ ಪಂಡಿತ್, ಮೊಗ್ಗಿನ ಮನಸು, ಒಲವೇ ಜೀವನ ಲೆಕ್ಕಾಚಾರ, ಲವ್ ಗುರು