ನಧೀಂ ಧೀಂ ತನಾ.. ಎಂದು ಹೆಜ್ಜೆ ಹಾಕಿ ಕಣ್ಣಲ್ಲೇ ಚಿತ್ತಾರ ಬರೆದು ಪ್ರೇಕ್ಷರಿಗೆ ಮೋಡಿ ಮಾಡಿದ ಗಾಳಿಪಟದ ಭಾವನಾ ರಾವ್ ಈಗ ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಟಿ.
WD
ಗಾಳಿಪಟ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಣಿಸಿಕೊಂಡ ಇವರು ಚಿತ್ರ ಹಿಟ್ ಆದರೂ ಕನ್ನಡದಲ್ಲಿ ಈಕೆಗೆ ಅವಕಾಶ ಸಿಗುವುದಕ್ಕೆ ಕಷ್ಟವಾಯಿತು. ಬಹಳ ದಿನಗಳ ಬಳಿಕ ಗಗನಚುಕ್ಕಿ ಸಿನಿಮಾದಲ್ಲಿ ಹೆಸರು ಕೇಳಿಬಂತಾದರೂ, ಚಿತ್ರ ಏನಾಯಿತೋ ಯಾರಿಗೂ ಗೊತ್ತಿಲ್ಲ.
ಅದಕ್ಕೇ ಆಕೆ ತವರು ಮನೆ ತೊರೆದು ತಮಿಳಿಗೆ ಹೋಗಿದ್ದು ಹಳೇ ಕಥೆ. ಅಲ್ಲಿ ತನ್ನ ಹೆಸರು ಬದಲಿಸಿ ಅಗ್ನಿ ಪರೀಕ್ಷೆಗೆ ಸಿದ್ಧವಾದುದೂ ಕನ್ನಡಿಗರಿಗೆ ಗೊತ್ತು. ಇಂತಿಪ್ಪ ಭಾವನಾ ಈಗ ತಮಿಳಿನ ಕೋಲಾ ಕೋಲೈ ಚಿತ್ರಕ್ಕೆ ನಾಯಕಿ. ಈಗಾಗಲೇ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಹೊಸ ಆಶಾವಾದದಲ್ಲಿ ಭಾವನಾ ಕನಸುಕಂಗಳಲ್ಲಿ ಭವಿಷ್ಯ ನಿಟ್ಟಿಸುತ್ತಾರೆ. ಆದರೂ ಭಾವನಾ ತವರುಮನೆ ಮರೆತಿಲ್ಲ. ಕನ್ನಡದಲ್ಲಿ ಮತ್ತೆ ಯಾರೇ ಉತ್ತಮ ಅವಕಾಶ ಕೊಟ್ಟರೂ ನಾನು ಖಂಡಿತವಾಗಿಯೂ ಬರುತ್ತೇನೆ ಅಂತಾಳೆ ಈ ಸುಂದರಿ. ಮನೆಮಗಳನ್ನು ಮತ್ತೆ ಯಾರು ತವರ ಮನೆಗೆ ಕರೆತರುತ್ತಾರೋ ನೋಡಬೇಕು. (ಭಾವನಾ ರಾವ್ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)