ಇಬ್ಬರಲ್ಲಿ ಯಾರು ಉತ್ತಮರು?
ಇಬ್ಬರು ನಾಯಕರಿಗೆ ಒಬ್ಬ ನಾಯಕಿ. ಇಬ್ಬರಲ್ಲಿ ಒಬ್ಬ ಆಕೆಯನ್ನು ನೋಡಿರುತ್ತಾನೆ. ಆದರೆ ಮಾತನಾಡಿಲ್ಲ. ಇನ್ನೊಬ್ಬ ಮಾತನಾಡಿದ್ದಾನೆ ಆದರೆ ನೋಡಿಲ್ಲ. ಕೊನೆಗೆ ನಾಯಕಿಯೊಂದಿಗೆ ಜೊತೆಯಾಗುವವರು ಯಾರು..? ಇದು ಕಣ್ಣಂಚಲಿ ಚಿತ್ರದ ಕಥಾಹಂದರ.ಚಿತ್ರದಲ್ಲಿ ನಾಯಕನಾಗಿ ಅನಿಲ್ ನಟಿಸುತ್ತಿದ್ದಾರೆ. ಇವರು ಈ ಮೊದಲು ಕರಿಯ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಮೂಲತಃ ಅವರಿಗೇನು ಚಿತ್ರದ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ. ಸ್ನೇಹಿತರು ಒತ್ತಾಯಿಸಿದಾಗ ಯಾಕಾಗಬಾರದು ಎಂಬ ಆಲೋಚನೆಗೆ ನಿರ್ದೇಶಕ ರವಿ ಪೂಜಾರಿ ನಾಯಕನ್ನಾಗಿಯೇ ಮಾಡಿದರು.ತೀವ್ರ ಬಡತನದಿಂದ ಬಂದಿರುವ ಅನಿಲ್ಗೆ ಸಿನಿಮಾದಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಛಲ ಇದೆ. ಚಿತ್ರದಲ್ಲಿ ನಿರ್ದೇಶಕರು, ತಂತ್ರಜ್ಞರು, ಕಲಾವಿದರೂ ಎಲ್ಲರೂ ಹೊಸಬರೆ. ಆದರೆ ನಾಯಕಿ ಶ್ವೇತಾ ರಾವ್ಗೆ ಇದು ಎರಡನೇ ಚಿತ್ರ. ಈ ಮೊದಲು ಒಂದೇ ಒಂದು ಸಾರಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.